ಗಂಡ, ಮಕ್ಕಳನ್ನು ಧ್ವಜಾರೋಹಣಕ್ಕೆ ಕಳಿಸಿ ಆತ್ಮಹತ್ಯೆಗೆ ಶರಣಾದ ಪಿಎಸ್ಐ ಪತ್ನಿ
ಬಳ್ಳಾರಿ : ಗಂಡ ಹಾಗೂ ಮಕ್ಕಳನ್ನು ಸಜ್ಜುಗೊಳಿಸಿ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಧ್ವಜಾರೋಹಣಕ್ಕೆ ಕಳುಹಿಸಿದ್ದ ನಂತರ ಪಿಎಸ್ಐ ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಬಳ್ಳಾರಿ ಜಿಲ್ಲೆಯ ಮೋಕಾದಲ್ಲಿ ನಡೆದಿದೆ.
ಮೋಕಾ ಠಾಣೆಯ ಪಿಎಸ್ಐ ಕೆ.ಕಾಳಿಂಗ ಅವರ ಪತ್ನಿ ಚೈತ್ರಾ ( 36 ) ಆತ್ಮಹತ್ಯೆಗೆ ಶರಣಾದ ಮಹಿಳೆ. ತವರುಮನೆಯ ಕೆಲ ಘಟನೆಗಳಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮೃತ ಮಹಿಳೆಗೆ ಮಾನಸಿಕ ಖಿನ್ನತೆ ಇತ್ತು. ತವರುಮನೆಯಲ್ಲಿ ಸಹೋದರರ ಅಕಾಲಿಕ ನಿಧನದಿಂದ ಖಿನ್ನತೆಗೆ ಒಳಗಾಗಿದ್ದರು. ಈ ಕುರಿತು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ತಿಳಿದುಬಂದಿದೆ.


