ಗೋಕಾಕ್ ಹೊಸ ಜಿಲ್ಲೆಯಾಗುತ್ತಾ..? ಏನಂದ್ರು ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ : ಬೆಳಗಾವಿ ಜಿಲ್ಲಾ ವಿಭಜನೆ ಚರ್ಚೆ ಕುರಿತು ಮಾತನಾಡಿದ ಅವರು. ಅತ್ಯಂತ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲಾ ವಿಭಜನೆ ಆಗಬೇಕು ಎಂಬುದು ನಮ್ಮ ಅಭಿಪ್ರಾಯ ಆಗಿದೆ. ಈ ಕುರಿತು ಕೆಲವು ಆಯೋಗಗಳು ವರದಿ ನೀಡಿದ್ದು ಬೆಳಗಾವಿ, ಚಿಕ್ಕೋಡಿ ಹಾಗೂ ಗೋಕಾಕ್ ಜಿಲ್ಲೆ ಆಗಬೇಕೆಂದು ಹೇಳಿವೆ. ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾ ವಿಭಜನೆ ಅನಿವಾರ್ಯ. ಈ ಕುರಿತು ಸರ್ಕಾರ ಯಾವ ನಿರ್ಧಾರ ತಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ಡಿಸಿಸಿ ಬ್ಯಾಂಕಿನಲ್ಲಿ ಯಾವುದೇ ಗೊಂದಲ ಇಲ್ಲ. ಕೆಲ ಭಾಗಗಳಲ್ಲಿ ಹೊಸದಾಗಿ ಸದಸ್ಯತ್ವ ಮಾಡುವ ಉದ್ದೇಶದಿಂದ ಒಂದುಬಾರಿ ಪ್ರಮುಖರು ಸೇರಿ ಸಭೆ ನಡೆಸುತ್ತೇವೆ ಎಂದು ಬೆಮುಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಗುರುವಾರ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಕೆಲವು ನಿರ್ದೇಶಕರು ಹೊಸದಾಗಿ ಸದಸ್ಯತ್ವ ಮಾಡುವಲ್ಲಿ ಗೊಂದಲ ಉಂಟಾಗಿದ್ದು ಇದನ್ನು ಸರಿ ಮಾಡಿದ ನಂತರ ಡಿಸಿಸಿ ಬ್ಯಾಂಕ್ ಸಬೆಗೆ ಹೋಗುತ್ತೇವೆ ಎಂದು ಹೇಳಿದರು. ಈ ಕುರಿತು ನಾವು ಉಸ್ತುವಾರಿ ಸಚಿವರು ಸೇರಿದಂತೆ ಅನೇಕ ನಿರ್ದೇಶಕರ ಗಮನಕ್ಕೆ ತಂದು ಅಧ್ಯಕ್ಷ ರಮೇಶ್ ಕತ್ತಿ ಅವರಿಗೆ ಅಭೆ ಮುಂದೂಡುವಂತೆ ಹೇಳಿದ್ದು ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.
ನಿಪ್ಪಾಣಿಯಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಉತ್ತಮ ಪಾಟೀಲ್ ಹಾಗೂ ರಮೆಶ್ ಕತ್ತಿ ಅವರು ಹೊಸ ಸದಸ್ಯತ್ವ ಮಾಡಿಸಿದ್ದರಿಂದ ಕೆಲವು ಗ್ರಾಹಕರು ಉಳಿದಿದ್ದಾರೆ. ಹೀಗಾಗಿ ಗೊಂದಲ ಉಂಟಾಗಿದೆ. ಇದು ಬಿಟ್ಟರೆ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ರಾಜ್ಯದಲ್ಲಿ ಅತ್ಯಂತ ದೊಡ್ಡ ಜಿಲ್ಲಾ ಸಹಕಾರಿ ಬ್ಯಾಂಕ್ ನಮ್ಮದಾಗಿದ್ದು ಎಲ್ಲರೂ ಒಟ್ಟುಗೂಡಿ ಮುಂದೆ ತಗೆದುಕೊಂಡು ಹೋಗುತ್ತೇವೆ ಎಂದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಸೂಕ್ತ :
ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ಅದು ಹೈ ಕಮಾಂಡ್ ತಗೆದುಕೊಂಡ ನಿರ್ಧಾರ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು. ಪಕ್ಷದಲ್ಲಿ ಕೆಲವು ಭಿನ್ನಾಭಿಪ್ರಾಯ ಇರಬಹುದು ಆದರೆ ಅವುಗಳನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಕುಳಿತು ಮಾತನಾಡಿ ಬಗೆಹರಿಸಿಕೊಂಡರೆ ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು ಎಂದರು.
ಕಳೆದ ಕೆಲ ದಶಕಗಳ ಹಿಂದೆ ಯಾವುದಾದರೂ ಘಟನೆ ಸಂಭವಿಸಿದರೆ ಅದಕ್ಕೆ ಸಂಬಂಧಪಟ್ಟವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವ ಸಂಪ್ರದಾಯ ಇತ್ತು. ಆದರೆ ಆ ಸಂಪ್ರದಾಯ ಈಗ ಕಂಡುಬರುತ್ತಿಲ್ಲ. ಸಿದ್ದರಾಮಯ್ಯ ಪ್ರಕರಣದಲ್ಲಿ ನಮ್ಮ ಪಕ್ಷ ತಗೆದುಕೊಂಡ ನಿರ್ಧಾರಕ್ಕೆ ನಾವೆಲ್ಲರೂ ಬೆಂಬಲ ಸೂಚಿಸಿದ್ದೇವೆ. ಹಿಂದೆ ಯಡಿಯೂರಪ್ಪ ವಿರುದ್ಧ ಆರೋಪ ಕೇಳಿಬಂದಾಗ ಇಂದಿನ ಸಿಎಂ ಸಿದ್ದರಾಮಯ್ಯ ಅವರೇ ಧ್ವನಿ ಎತ್ತಿದ್ದರು ಎಂದು ಮಾರ್ಮಿಕವಾಗಿ ನುಡಿದರು.
ವಾಲ್ಮಿಕಿ ಹಗರಣದ ಕುರಿತು ಮಾತನಾಡಿದ ಇವರು. ಈಗಾಗಲೇ ವಾಲ್ಮೀಕಿ ಪ್ರಕರಣದಲ್ಲಿ ಎಸ್ಐಟಿ ತನಿಖೆ ಕೈಗೊಂಡಿದ್ದು ಚಾರ್ಜಶೀಟ್ ಹಂತಕ್ಕೆ ಬಂದಿದೆ. ಹಾಗೆಯೇ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದಾಗಿದೆ. ವಾಲ್ಮೀಕಿ ನಿಗಮದ ಹಣಗರದ ಕುರಿತು ಬಿಜೆಪಿ ಧ್ವನಿ ಎತ್ತಿದೆ. ಮುಡಾ ಪ್ರಕರಣದಲ್ಲಿ ತಪಿತಸ್ಥರ ವಿರುದ್ಧ ತನಿಖೆ ನಡೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಕಿತ್ತೂರು ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ್ ಉಪಸ್ಥಿತರಿದ್ದರು.


