Select Page

Advertisement

ಬೆಳಗಾವಿ : ಕತ್ತು ಕೊಯ್ದು ವ್ಯಕ್ತಿಯ ಹತ್ಯೆ, ಹಿಡಿತ ತಪ್ಪಿತಾ ಕಾನೂನು ಸುವ್ಯವಸ್ಥೆ..?

ಬೆಳಗಾವಿ : ಕತ್ತು ಕೊಯ್ದು ವ್ಯಕ್ತಿಯ ಹತ್ಯೆ, ಹಿಡಿತ ತಪ್ಪಿತಾ ಕಾನೂನು ಸುವ್ಯವಸ್ಥೆ..?

ಬೈಲಹೊಂಗಲ- ತಾಲೂಕಿನ ವನ್ನೂರ ಗ್ರಾಮದಲ್ಲಿ ಮನೆಯ ಮುಂಭಾಗಿಲಿನಲ್ಲಿ ಮಲಗಿದ ವ್ಯಕ್ತಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ ಘಟಣೆ ರವಿವಾರ ತಡ ರಾತ್ರಿ ನಡೆದಿದೆ.

ಗ್ರಾಮದ ನಿಂಗಪ್ಪ ಬಸಪ್ಪ ಅರವಳ್ಳಿ (41) ರಾತ್ರಿ ಸರಾಯಿ ಕುಡಿದ ನಶೆಯಲ್ಲಿ ಮನೆಯ ಕಟ್ಟೆಯ ಮೇಲೆ ಮಲಗಿದ್ದನು. ಬೆಳಗಿನ ಜಾವ 6 ಗಂಟೆಗೆ ಪತ್ನಿ ನೀಲಮ್ಮ ಮನೆಯ ಬಾಗಿಲು ತೆರೆದು ನೋಡಿದಾಗ ಗಂಡ ಕೊಲೆಯಾದದ್ದನ್ನು ಕಂಡು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದಾಗ ಕೊಲೆಯಾದ ವಿಷಯ ಗೊತ್ತಾಗಿದೆ.

ಹರಿತವಾತ ಆಯುಧದಿಂದ ಕುತ್ತಿಗೆಯನ್ನು ಸಿಳ್ಳಿ ಕೊಲೆ ಮಾಡಲಾಗಿದ್ದು, ಎಸ್ಪಿ ಭೀಮಾಶಂಕರ ಗುಳೇದ, ಬೈಲಹೊಂಗಲ ಡಿವಾಯ್‍ಎಸ್‍ಪಿ ರವಿ ನಾಯ್ಕ ಘಟಣಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸಿಪಿಐ ರಾಘವೇಂದ್ರ ಹಲಾಲ್ದಾರ ನೇತೃತ್ವದಲ್ಲಿ ತಂಡ ರಚಿಸಿ, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!