ಬೈಲಹೊಂಗಲ : ಚಾಕುವಿನಿಂದ ಇರಿದು ಯುವಕನ ಹತ್ಯೆ
ಬೈಲಹೊಂಗಲ: ವೈಯುಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಯುವಕ ನನ್ನು ಚಾಕು ಹಾಗೂ ಮಾರ ಕಾಸ್ತ್ರಗಳಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ ಘಟನೆ ಪಟ್ಟಣದ ಹೊರವಲಯದ ಬಸವೇಶ್ವರ ಆಶ್ರಯ ಕಾಲೂನಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಬಸವೇಶ್ವರ ಆಶ್ರಯ ಕಾಲೂನಿ ನಿವಾಸಿ ರವಿ ತಿಮ್ಮಣ್ಣವರ (23) ಕೊಲೆಯಾದವ. ಸುಮಾರು 7 ರಿಂದ 13 ಜನ ಯುವಕರ ಗುಂಪು ಯುವಕನ ಮೇಲೆ ಚಾಕುವಿನಿಂದ ಇರಿದು ಕೊಲೆ ಗೈದಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ರವಿ ನಾಯ್ಕ, ಸಿಪಿಐ ಪಂಚಾಕ್ಷರಿ ಸಾಲಿಮಠ ಭೇಟಿ ತನಿಖೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ.
ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


