Select Page

Advertisement

ಬೈಲಹೊಂಗಲ : ರಸ್ತೆ ಬಿಟ್ಟು ಕಬ್ಬಿನ ಗದ್ದೆಗೆ ನುಗ್ಗಿದ ಬಸ್ ; ತಪ್ಪಿದ ಅನಾಹುತ

ಬೈಲಹೊಂಗಲ : ರಸ್ತೆ ಬಿಟ್ಟು ಕಬ್ಬಿನ ಗದ್ದೆಗೆ ನುಗ್ಗಿದ ಬಸ್ ; ತಪ್ಪಿದ ಅನಾಹುತ

ಬೈಲಹೊಂಗಲ : ಸೋಯಾಬಿನ್ ರಾಶಿ ಮಶೀನ ವಾಹನ ಅಡ್ಡ ಬಂದ ಪರಿಣಾಮ ಎದುರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು 6ಕ್ಕಿಂತ ಹೆಚ್ಚು ಜನ ಪ್ರಯಾಣ ಕರು ಗಾಯಗೊಂಡ ಘಟನೆ ತಾಲೂಕಿನ ನಯಾನಗರದ ಮಲಪ್ರಭಾ ನದಿಯ ಹತ್ತಿರ ಬುಧವಾರ ಮಧ್ಯಾಹ್ನ ನಡೆದಿದೆ.

ಸಾರಿಗೆ ಬಸ್ ಧಾರವಾಡದಿಂದ ಬೈಲಹೊಂಗಲಕ್ಕೆ ಬರುವ ಮಾರ್ಗ ಮದ್ಯೆ ನಯಾನಗರದ ಮಲಪ್ರಭಾ ನದಿ ಹತ್ತಿರದ ಸೋಯಾಬಿನ್ ರಾಶಿ ಮುಗಿಸಿ ಬರುತ್ತಿದ್ದ ಯಂತ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಚಾಲಕನ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿ, ಬಸ್ ಕಬ್ಬಿನ ಗದ್ದೆಗೆ ನುಗ್ಗಿಸಿದ್ದಾನೆ. ಅದೃಷ್ಟಾವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಗಾಯಗೊಂಡ ನಿರ್ವಾಹಕ ಹಾಗೂ ಪ್ರಯಾಣ ಕರನ್ನು ಸಮಾಜ ಸೇವಕ ಮಲ್ಲಿಕಾರ್ಜುನ ಗಾಣ ಗೇರ ಹಾಗೂ ಜಾಲಿಕೊಪ್ಪ ಗ್ರಾಮಸ್ಥರು 108 ಅಂಬುಲೆನ್ಸ್ ಮೂಲಕ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದ್ದಾರೆ.

ಸುನಂಧಾ ಮಡಿವಾಳರ, ಸುನಿತಾ ದೊಡಮನಿ, ಪ್ರಶಾಂತ ಕಂಚಿ, ಗಂಗವ್ವಾ ನಾಡಗೌಡರ, ಸರೋಜಿನಿ ಉಡಕೇರಿ, ಕಸ್ತೂರಿ ಹುಡೇದ ಗಾಯಗೊಂಡವರು ಎಂದು ತಿಳಿದು ಬಂದಿದೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!