Select Page

Advertisement

ಬೃಹತ್ ಮರ ಬಿದ್ದು ಕಾರು ಜಖಂ ; ತಪ್ಪಿದ ಅನಾಹುತ

ಬೃಹತ್ ಮರ ಬಿದ್ದು ಕಾರು ಜಖಂ ; ತಪ್ಪಿದ ಅನಾಹುತ

ಬೈಲಹೊಂಗಲ : ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿ ಆವರಣದಲ್ಲಿನ ಬೃಹತ್ ಮರ ಬಿದ್ದು 1 ಕಾರು, 2 ಮೋಟಾರ ಬೈಕ್ ಸಂಪೂರ್ಣ ನುಜ್ಜಾದ ಘಟನೆ ಮಂಗಳವಾರ ನಡೆದಿದೆ.

ಹಳೆಯದಾದ ಮರವನ್ನು ತೆರೆವುಗೊಳಿಸುವಂತೆ ಸಾರ್ವಜನಿಕರು ಸಾಕಷ್ಟು ಬಾರಿ ಬಿಎಸ್‌ಎನ್‌ಎಲ್ ಕಚೇರಿಯ ಅಧಿಕಾರಿಗಳಿಗೆ ಹೇಳಿದರೂ ಕೂಡಾ ಸರಿಯಾಗಿ ಸ್ಪಂದಿಸದೆ, ನಿರ್ಲಕ್ಷö್ಯವಹಿಸಿದ್ದರಿಂದ ಘಟನೆ ನಡೆದಿದೆ. ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ನಿತ್ಯ ನೂರಾರು ಜನ ಆಧಾರ ಕಾರ್ಡ್ ಮಾಡಿಸಿಕೊಳ್ಳಲು ಅಲೆದಾಡುತ್ತಾರೆ ಅದೃಷ್ಟಾವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಪಕ್ಕದ ಎಪಿಎಂಸಿ ಮಳಿಗೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಈ ಕುರಿತು ಬಿಎಸ್‌ಎನ್‌ಎಲ್ ಅಧಿಕಾರಿಗಳ ಗಮನಕ್ಕೆ ತಂದರೆ ಉಡಾಫೆ ಉತ್ತಾರ ನೀಡುತ್ತಿದ್ದಾನೆ ಎಂದು ಸಾರ್ವಜನಿಕರು ದೂರಿದರು. ಬೃಹತ್ ಮರ ಬಿದ್ದ ರಭಸಕ್ಕೆ ಗೋಡೆ ಕುಸಿದು 3 ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿವೆ.

ಈ ಘಟನೆಗೆ ಬಿಎಸ್‌ಎನ್‌ಎಲ್ ಅಧಿಕಾರಿಯೇ ಹೊಣೆ ಎಂದು ವಾಹಾನ ಮಾಲಿಕರು ದೂರಿದರು. ಘಟನಾ ಸ್ಥಳಕ್ಕೆ ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿಎಸ್‌ಐ ಎಫ್.ವೈ.ಮಲ್ಲೂರ ಭೇಟಿ ನೀಡಿ ಪರಿಶೀಲಿಸಿದರು.

Advertisement

Leave a reply

Your email address will not be published. Required fields are marked *

error: Content is protected !!