ಶಾಲೆಯ ಹಣ ದುರ್ಬಳಕೆ ಆರೋಪ : ಮುಖ್ಯ ಶಿಕ್ಷಕ ಅಮಾನತು
ಬಾಗಲಕೋಟೆ : ಮಕ್ಕಳಿಗೆ ಶಿಕ್ಷಣ ನೀಡಬೇಕಿದ್ದ ಶಿಕ್ಷಕನೇ ಶಾಲಾ ಅನುದಾನ ಹಣ ದುರ್ಬಳಕೆ ಆರೋಪದಲ್ಲಿ ಅಮಾನತುಗೊಂಡ ಪ್ರಕರಣ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೋಲುರು ಪ್ರೌಢ ಶಾಲೆಯ ಮುಖ್ಯಶಿಕ್ಷಕ ಡಿ.ಹೆಚ್.ಅಂಗಡಿ ಅಮಾನತು ಆಗಿರುವ ಶಿಕ್ಷಕ. ಅಟಲ್ ಟಿಂಕರಿಂಗ ಲ್ಯಾಬ್ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಶಿಕ್ಷಕನ ಮೇಲೆ ಕೇಳಿಬಂದಿತ್ತು.
ಅಷ್ಟೇ ಅಲ್ಲದೆ. ಈ ಶಿಕ್ಷಕ 10ನೇ ತರಗತಿ ವಿದ್ಯಾರ್ಥಿಗಳ ಹಾಲ್ ಟಿಕೆಟ್ ನೀಡಲು 100 ರೂಪಾಯಿ ವಸೂಲಿ ಮಾಡುತ್ತಿದ್ದರು. ವರ್ಗಾವಣೆ ಪತ್ರ ನೀಡಲು ವಿದ್ಯಾರ್ಥಿಗಳಿಂದ 100 ರೂಪಾಯಿ ಪಡೆಯುತ್ತಿದ್ದರು.
ಈ ಧಾರವಾಡ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರು ಆದೇಶ ಹೊರಡಿಸಿದ್ದು, ಶಾಲಾ ಅನುದಾನದ ಹಣ ದುರ್ಬಳಕೆ, ವಿದ್ಯಾರ್ಥಿಗಳಿಂದ ಹಣ ಪಡೆದ ಆರೋಪದಲ್ಲಿ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ.


