Select Page

Advertisement

Video – ಶ್ರೀರಾಮನಿಗೆ ಬೆಳಗಲು‌ ತಯಾರಾದ 108 ಅಡಿ ಉದ್ದದ ಅಗರಬತ್ತಿ

Video – ಶ್ರೀರಾಮನಿಗೆ ಬೆಳಗಲು‌ ತಯಾರಾದ 108 ಅಡಿ ಉದ್ದದ ಅಗರಬತ್ತಿ

ವಡೋದರಾ : ಜ.22 ರಂದು ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಮನಿಗೆಂದು ದೇಶದ ವಿವಿಧೆಡೆಯಿಂದ ವಿವಿಧ ವಿಶೇಷ ಉಡುಗೊರೆಗಳು ಹರಿದು ಬರುತ್ತಿವೆ.

ಈ ನಡುವೆ ಗುಜರಾತ್‌ನ ವಡೋದರಾದಲ್ಲಿ ಬರೋಬ್ಬರಿ ದಾಖಲೆಯ 108 ಅಡಿ ಉದ್ದದ ಹಾಗೂ 3.5 ಅಡಿ ಅಗಲವಿರುವ ಅಗರಬತ್ತಿಯನ್ನು ಭಕ್ತರು ತಯಾರಿಸಿದ್ದಾರೆ.
ಈ ಅಗರಬತ್ತಿಯು ಬರೋಬ್ಬರಿ 3,500 ಕೇಜಿ ತೂಕವಿದ್ದು ಶೀಘ್ರದಲ್ಲೇ ಇದನ್ನು ಅಯೋಧ್ಯೆಗೆ ಕಳುಹಿಸಲಾಗುತ್ತದೆ.

ವಡೋದರದ ತರ್ಸಾಲಿ ಪ್ರದೇಶದ ನಿವಾಸಿ ವಿಹಾಭಾಯಿ ಭಾರವಾಡ್ ಅವರು ತಮ್ಮ ಮನೆಯ ಹೊರಗೆ ಕಳೆದ ಆರು ತಿಂಗಳಿಂದ ಏಕಾಂಗಿಯಾಗಿ ಈ ಅಗರಬತ್ತಿಯನ್ನು ತಯಾರಿಸುತ್ತಿದ್ದಾರೆ.

ಅಯೋಧ್ಯೆಯ ನೂತನ  ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣವು ಡಿ.30ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಉದ್ಘಾಟನೆ ಆಗಲಿದೆ ತಿಳಿದು ಬಂದಿದೆ.

ಅಂದು ದೆಹಲಿಯಿಂದ ಅಯೋಧ್ಯೆಗೆ ಬರುವ ಏರ್ ಇಂಡಿಯಾ ವಿಮಾನವು ಮೊದಲ ಬಾರಿಗೆ ಅಯೋಧ್ಯೆ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲಿದೆ. ಈ ಮೂಲಕ ನಿಲ್ದಾಣದ ಉದ್ಘಾಟನೆ ನಡೆಯಲಿದೆ. ಬಳಿಕ ಜ.16ರಿಂದ ತನ್ನ ದೈನಂದಿನ ಸೇವೆಯನ್ನು ವಿಮಾನ ಪ್ರಾರಂಭಿಸುತ್ತದೆ ಎಂದು ಏರ್ ಇಂಡಿಯಾ ಘೋಷಿಸಿದೆ.

#ಅಯೋಧ್ಯ #ರಾಮಮಂದಿರ #ವಡೋದರ
#ayodhyarammandir #108Agarabati #Vadodara  #jaishreeram

Advertisement

Leave a reply

Your email address will not be published. Required fields are marked *

error: Content is protected !!