
ಸವದಿಗೆ ನಮ್ಮ ಬೆಂಬಲ ಇಲ್ಲ ಎಂದ ಪಂಚಮಸಾಲಿ ಮೂರನೇ ಪೀಠದ ಜಗದ್ಗುರು

ಬೆಳಗಾವಿ : ನನಗೆ ಅಥಣಿ ಪಂಚಮಸಾಲಿ ಸಮುದಾಯದ ಬೆಂಬಲ ಇದೆ ಎಂದು ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಪಂಚಮಸಾಲಿ ಸಮುದಾಯದ ಜಗದ್ಗುರುಗಳು ಹೇಳಿಕೆ ನೀಡಿದ್ದು ನಮ್ಮ ಬೆಂಬಲ ಶಾಸಕ ಮಹೇಶ್ ಕುಮಠಳ್ಳಿ ಅವರಿಗೆ ಎಂದು ಹೇಳಿದ್ದಾರೆ.

ಪಂಚಮಸಾಲಿ ಸಮುದಾಯದ ಆಲಗೂರ ಮೂರನೇ ಪೀಠದ ಜಗದ್ಗುರು ಮಹಾದೇವ ಶಿವಾಚಾರ್ಯ ಶ್ರೀ ಪ್ರತಿಕ್ರಿಯೆ ನೀಡಿದ್ದು. ನಮ್ಮದೆ ಸಮುದಾಯದ ಶಾಸಕ ಇರುವಾಗ ನಾವು ಬೇರೆಯವರಿಗೆ ಬೆಂಬಲ ನೀಡುವ ಪ್ರಶ್ನೆ ಇಲ್ಲ. ಮಹೇಶ್ ಕುಮಠಳ್ಳಿ ನಮ್ಮ ಸಮಾಜದ ಪರವಾಗಿ ಯಾವತ್ತೂ ನಿಂತಿದ್ದು ಸಮಾಜ ಅವರ ಪರವಾಗಿ ಇರುತ್ತದೆ ಎಂದು ಹೇಳುವ ಮೂಲಕ ಲಕ್ಷ್ಮಣ ಸವದಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.