ಅಥಣಿ : ಅಕ್ರಮ ವೇಶ್ಯಾವಾಟಿಕೆ ದಂಧೆ…? Video ವೈರಲ್, ಸತ್ಯಾಸತ್ಯತೆ ಏನು…?
ಕಳೆದ ಕೆಲ ದಿನಗಳ ಹಿಂದೆ ಅಷ್ಟೇ ರಾಯಬಾಗ ತಾಲೂಕಿನ ಕುಡಚಿಯ ಪ್ರತಿಷ್ಠಿತ ಲಾಡ್ಜ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ತಡೆದಿದ್ದ ಪೊಲೀಸರು ಮೂವರು ಯುವತಿಯರನ್ನು ರಕ್ಷಣೆ ಮಾಡಿದ್ದರು.
ಅಥಣಿ : ಇತಿಹಾಸ ಪ್ರಸಿದ್ಧ ಪುರುಷರ ಜನ್ಮಭೂಮಿಯಾದ ಅಥಣಿಯ ನೆಲದಲ್ಲಿ ಸಧ್ಯ ಮಾಂಸ ದಂದೆಯ ವಾಸನೆ ಬರುತ್ತಿದೆ. ಹೊರ ಭಾಗಗಳಿಂದ ಮಹಿಳೆಯರನ್ನು ತಂದು ವೇಶ್ಯಾವಾಟಿಕೆ ದಂದೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸಧ್ಯ ಅಥಣಿಯ ಪ್ರತಿಷ್ಠಿತ ಲಾಡ್ಜ್ ಒಂದರಲ್ಲಿ ಯುವತಿಯ ಜೊತೆ ನಡೆದ ಸಂಭಾಷಣೆ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತು ಯಾವುದೇ ನಿಖರ ಮಾಹಿತಿ ಬೆಳಗಾವಿ ವಾಯ್ಸ್ ತಂಡಕ್ಕೆ ತಿಳಿದುಬಂದಿಲ್ಲ.
ಒಟ್ಟಿನಲ್ಲಿ ಜಿಲ್ಲೆಯ ಅನೇಕ ತಾಲೂಕುಗಳಲ್ಲ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ಸಾಗುತ್ತಿದ್ದು ಪೊಲೀಸ್ ಇಲಾಖೆ ಮತ್ತಷ್ಟು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಒಮ್ಮೆ ಬಿಗಿಯಾದ ಕಾನೂನು ಜಾರಿಯಾದರೆ ಈ ರೀತಿಯ ಅವ್ಯವಹಾರಕ್ಕೆ ಕಡಿವಾಣ ಬೀಳುವಲ್ಲಿ ಸಂಸಯವಿಲ್ಲ.


