Select Page

Advertisement

ಅಥಣಿಯಲ್ಲಿ ಬೈಕ್ ಕಳ್ಳರ ಬಂಧನ : 6 ಬೈಕ್ ವಶ

ಅಥಣಿಯಲ್ಲಿ ಬೈಕ್ ಕಳ್ಳರ ಬಂಧನ : 6 ಬೈಕ್ ವಶ

ಅಥಣಿ : ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ಬೈಕ್ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಐಗಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

 ಪೊಲೀಸ್ ಇಲಾಖೆಯ  ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಐಗಳಿ ಪೊಲೀಸರು  ಕಾರ್ಯಚರಣೆ ನಡೆಸಿ 3 ಜನ ಬೈಕ್ ಕಳ್ಳತನ ಮಾಡಿದ ಆರೋಪಿಗಳನ್ನು ಬಂದಿಸಿ, ಅವರಿಂದ 2 ಲಕ್ಷ 50 ಸಾವಿರ ರೂ. ಮೌಲ್ಯದ  6 ಮೋಟಾರ್ ಸೈಕಲ್ ಗಳನ್ನ ವಶಪಡಿಸಿಕೊಂಡಿದ್ದಾರೆ.

ಅಥಣಿ ಡಿವೈಎಸ್ಪಿ  ಶ್ರೀಪಾದ್ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ ಮಾರ್ಗದರ್ಶನದಲ್ಲಿ  ಐಗಳಿ ಪಿಎಸ್ಐ ಸುಮಲತಾ ಆಸಂಗಿ ನೇತೃತ್ವದಲ್ಲಿ  ಎಎಸ್ಐ ಎಸ್ ಎಮ್ ಮೇತ್ರಿ, ಜೆ ಐ ಪಟೇಗಾರ, ಡಿ ಟಿ ಶಾನುವಾಡ, ಎಸ್ ಎಚ್ ಸುನಗೊಂಡ, ಎ ಸಿ ಮುಜಾವರ, ಜಿ. ಪಿ ರಾಥೋಡ, ಆರ್ ಪಿ  ಕೊಣ್ಣೂರ, ವಿ. ಕೆ ಕಾಂಬಳೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕೈಗಳಿ ಪೊಲೀಸರು ಈ ಕಾರ್ಯಾಚರಣೆಗೆ  ಬೆಳಗಾವಿ ಎಸ್ ಪಿ  ಡಾ. ಸಂಜೀವ್ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!