ಅಥಣಿ – ಕೃಷ್ಣಾ ನದಿಯಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ ಮರಳು ಸಾಗಾಟ ಕಾರ್ಯ ; ಕಣ್ಮುಚ್ಚಿ ಕುಳಿತ ಅಧಿಕಾರಿ ವರ್ಗ
ಬೆಳಗಾವಿ : ಅಥಣಿ ತಾಲೂಕಿನಲ್ಲಿ ಹಾದು ಹೋಗುವ ಕೃಷ್ಣಾ ನದಿ ಪಾತ್ರದ ಸಪ್ತಸಾಗರ, ತಿರ್ಥ ಗ್ರಾಮದ ಸೇರಿದಂತೆ ಅನೇಕ ಕಡೆಗಳಲ್ಲಿ ನದಿಯಿಂದ ಅಕ್ರಮ ಮರಳು ಎತ್ತುದ ಕಾರ್ಯ ನಡೆದಿದ್ದರು ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಈಗಾಗಲೇ ಕೃಷ್ಣಾ ನದಿಗೆ ನೀರು ಬಿಟ್ಟಿದ್ದರು ಇನ್ನೂ ಅಥಣಿ ಭಾಗಕ್ಕೆ ತಲುಪಲಿಲ್ಲ. ಈ ಮಧ್ಯೆ ಅಕ್ರಮ ಮರಳು ಸಾಗಾಟ ದಂದೆ ಜೋರಾಗಿದ್ದರು ಪೊಲೀಸ್ ಇಲಾಖೆ ಮಾತ್ರ ತನಗೆ ಸಂಬಂಧ ಇಲ್ಲದಂತೆ ವರ್ತನೆ ಮಾಡುತ್ತಿದೆ
ರಾತ್ರಿ ಎಂಟು ಗಂಟೆಯಾದರೆ ಸಾಕು ರಾತ್ರಿಯಿಡೀ ಮರಳು ಎತ್ತುವ ಕಾರ್ಯ ವೇಗದಲ್ಲಿ ಸಾಗುತ್ತದೆ. ಈ ಮಧ್ಯೆ ವೇಗದಲ್ಲಿ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಅಕ್ರಮ ಮರಳು ಸಾಗಿಸುವವರು ಜನರ ಪ್ರಾಣಕ್ಕೂ ಕುತ್ತು ತರುತ್ತಿದ್ದಾರೆ.
ಈಗಾಗಲೇ ಮರಳು ತುಂಬಿದ ಟ್ರಾಕ್ಟರ್ ಒಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ನದಿ ಇಂಗಳಗಾಂವ ಗ್ರಾಮದ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ಕೂಡಾ ನಡೆದಿದ್ದರು. ಅಧಿಕಾರಿಗಳು ಮಾತ್ರ ನಿದ್ರೆಯಲ್ಲಿರುವುದು ವಿಪರ್ಯಾಸವೇ ಸರಿ.

