ಅಥಣಿ : ಸಿಡಿಲಿಗೆ ಇಬ್ಬರು ಬಲಿ
ಅಥಣಿ : ರಾಜ್ಯದಲ್ಲಿ ಮುಂಗಾರು ಮಳೆ ಆಗಮನ ಮೊದಲೇ ಅಬ್ಬರ ಹೆಚ್ಚಾಗಿದ್ದು, ಸಂಜೆ ಸುರಿದ ಮಳೆಗೆ ಅಥಣಿಯಲ್ಲಿ ಸಿಡಿಲು ಹೊಡೆದು ಇಬ್ಬರು ಅಸುನೀಗಿದ ಘಟನೆ ನಡೆದಿದೆ.

ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಕೆಸ್ಕರಿ ದಡ್ಡಿ ನಿವಾಸಿಯಾದ ಅಮೂಲ್ ಜಯಸಿಂಗ ಕಾನಡೆ (೨೪) ಹಾಗೂ ದೇಸಾರಹಟ್ಟಿ ಗ್ರಾಮದಲ್ಲಿ ವಿಠ್ಠಬಾಯಿ ಮಹದೇವ ಕಾಮಕರ (೫೦) ಮೃತ ದುರ್ದೈವಿಗಳು.

ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

