ಮಚ್ಚು ಹಿಡಿದು ಹುಚ್ಚಾಟ ಮೆರೆದವನ ಹೆಡೆಮುರಿ ಕಟ್ಟಿದ ಅಥಣಿ ಪೊಲೀಸ್
ಅಥಣಿ : ಕೈಯಲ್ಲಿ ಲಾಂಗು, ಮಚ್ಚು ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಮಧ್ಯೆ ಕಾನೂನು ಉಲ್ಲಂಘನೆ ಮಾಡಿದವರಿಗೆ ಪೊಲೀಸರು ಸರಿಯಾದ ರೀತಿಯಲ್ಲೇ ಪಾಠ ಕಲಿಸುತ್ತಿದ್ದಾರೆ. ಈ ಕುರಿತು ಬೆಳಗಾವಿ ಎಸ್ಪಿ ( Belagavi Sp ) ಅವರ ಎಚ್ಚರಿಕೆ ಮಧ್ಯೆ ಅಥಣಿಯಲ್ಲಿ ಯುವಕನೋರ್ವ ಹುಚ್ಚಾಟ ಮೆರೆದಿದ್ದಾನೆ.
ಕೈಯಲ್ಲಿ ತಲ್ವಾರ್ ಹಿಡಿದು ರಿಲ್ಸ್ ಮಾಡಿ ಸಿನಿಮಾ ಮಾದರಿಯಲ್ಲಿ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಲೈಕ್ ಗಾಗಿ ಕಾಯುತ್ತಿದ್ದ ಯುವಕನ ಅಥಣಿ ಪೋಲೀಸರು ಹೆಡೆಮುರಿಕಟ್ಟಿದ್ದಾರೆ.
ಅಥಣಿ ಪಟ್ಟಣದ ಮಹಾಂತೇಶ ಸದಾಶಿವ ಮಾಳಿ ಎಂಬ ಯುವಕ ತನ್ನ ಇನ್ಸ್ಟಾ ಪೇಜ್ ನಲ್ಲಿ ಕೈಯಲ್ಲಿ ತಲ್ವಾರ್ ಹಿಡಿದು,ಶಿವರಾಜಕುಮಾರ್ ನಟನೆಯ “ಶಿವ” ಚಿತ್ರದ ಅಂಡರ್ವರ್ಡ್ ಅಂದ್ರೆ ಇಷ್ಟ ಕಣ್ರೀ, ಹಳೆ ಲಾಂಗು ಅಂದ್ರೆ ಬೆಸ್ಟು ಕಣ್ರೀ ಎಂಬ ಹಾಡಿಗೆ ರಿಲ್ಸ್ ಮಾಡಿ ಪೋಸ್ ಕೊಟ್ಟಿದ್ದ. ರಿಲ್ಸ್ ರಾಜನ ಹುಚ್ಚಾಟಕ್ಕೆ ಅಥಣಿ ಪೋಲೀಸರು ಕೇಸ್ ದಾಖಲಿಸಿದ್ದಾರೆ.
ಈ ರೀತಿಯಲ್ಲಿ ಆಯುಧ ಹಿಡಿದು ಪೋಸ್ ಕೊಡುವವರ ವಿರುದ್ಧ ಬೆಳಗಾವಿ ಜಿಲ್ಲಾ ಪೊಲೀಸ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು ಯುವಕರು ಸಾಮಾಜಿಕ ಕಳಿಕಳಿ ಸ್ವಾಸ್ತ್ಯ ಕಾಪಾಡುವಂತೆ ಅಥಣಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ್ ( Athani PSI ) ಎಚ್ಚರಿಕೆ ನೀಡಿದ್ದಾರೆ.


