ಅಥಣಿ ಮಹಿಳೆ ಕೊಲೆಗೆ ಟ್ವಿಸ್ಟ್ ; ಮಕ್ಕಳಾಗಲಿಲ್ಲ ಎಂದು ಸೊಸೆಯನ್ನು ಜಜ್ಜಿ ಕೊಂದ ಅತ್ತೆ…!
ಅಥಣಿ : ತಾಲೂಕಿನ ಮಲಾಬಾದ ಗ್ರಾಮದ ರೇಣುಕಾ ಸಂತೋಷ ಹೋನಕಾಂಡೆ (34 ) ಕೊಲೆ ಪ್ರಕರಣ ಸತ್ಯಾಸತ್ಯತೆ ಹೊರಬರುತ್ತಿದ್ದು , ಮಹಿಳೆಗೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಅತ್ತೆ, ಗಂಡ, ಮಾವ ಸೇರಿ ಕೊಲೆ ಮಾಡಿದ್ದು ಬೆಳಕಿಗೆ ಬಂದಿದೆ.
ಶನಿವಾರ ತಡ ರಾತ್ರಿ 10 ಗಂಟೆ ಸುಮಾರಿಗೆ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿ ನಂತರ ಬೈಕ್ ನ ಹಿಂಬದಿ ಚಕ್ರಕ್ಕೆ ಮಹಿಳೆ ಸೀರೆ ಸುತ್ತಿ ಸುಮಾರು ಹತ್ತಾರು ಅಡಿ ಎಳೆದು ಅಪಘಾತವಾಗಿದೆ ಎಂದು ಬಿಂಬಿಸುವಂತೆ ಕಥೆ ಕಟ್ಟಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆಯ ಗಂಡ, ಮಾವ, ಅತ್ತೆ ಸೇರಿದಂತೆ ಅವರ ಸಂಬಂಧಿಕರು ಸೇರಿ ಆರು ಜನ ಮಹಿಳೆಯನ್ನ ಕೊಲೆ ಮಾಡಿ, ರಸ್ತೆ ಅಪಘಾತದ ಕಥೆ ಕಟ್ಟುತ್ತಿದ್ದಾರೆ, ಅವರನ್ನ ಕೂಡಲೇ ಬಂಧಿಸಿ ತನಿಖೆಗೆ ಒಳಪಡಿಸಬೇಕೆಂದು ಹರೀಶ ಮಲ್ಲಿಕಾರ್ಜುನ ಹರಳಿ ಎಂಬವರು ದೂರು ಸಲ್ಲಿಸಿದ್ದರು.
ಈ ಪ್ರಕರಣ ಆಧರಿಸಿ ಅಥಣಿ ಠಾಣೆ ಪೊಲೀಸರು ಮೃತ ಮಹಿಳೆ ಮಾವ ಕಾಮಣ್ಣ ಹೊನಕಾಂಡೆ, ಪತಿ ಸಂತೋಷ ಹೊನಕಾಂಡೆ ಹಾಗೂ ಅತ್ತೆ ಜಯಶ್ರೀ ಹೊನಕಾಂಡೆ ಎಂಬುವವರನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿದ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೆದ್, ಶನಿವಾರ, ರಾತ್ರಿ ಎಂಟು ಗಂಟೆಗೆ ಮಲಬಾದಿ ಗ್ರಾಮದ ಹತ್ತಿರ ಮೋಟಾರ್ ಸೈಕಲ್ ಮೇಲೆ ಹೋಗುತ್ತಿರುವಾಗ ಆರೋಪಿತರಾದ ಕಾಮಣ್ಣ ಹೊನಕೊಂಡೆ ಮತ್ತು ಜಯಶ್ರೀ ಹಣಕಾಂಡೆ ಇವರು ತಮ್ಮ ಮೋಟಾರ್ ಸೈಕಲ್ ಮೇಲೆ
ಅವರ ಸೊಸೆ ಶ್ರೀಮತಿ ರೇಣುಕಾ ಸಂತೋಷ್ ಹೊನಕಂಡೆ ಇವರನ್ನು ಕೂಡಿಸಿಕೊಂಡು ಹೋಗುವಾಗ ಮಲಬಾದಿ ಗ್ರಾಮದ ಹತ್ತಿರ ರಸ್ತೆ ಮೇಲೆ ರೇಣುಕಾ ಇವಳನ್ನು ಕೆಳಕ್ಕೆ ಕೆಡವಿ ನಂತರ ಅವಳ ತಲೆಗೆ ಕಲ್ಲಿನಿಂದ ಜಜ್ಜಿ ಕುತ್ತಿಗೆಗೆ ಸೀರೆಯಿಂದ ಬಿಗಿದು ಕತ್ತು ಹಿಚುಕಿ ಕೊಲೆ ಮಾಡಿ, ನಂತರ
ಮೃತಳ ಸೀರೆಯು ಮೋಟಾರ್ ಸೈಕಲ್ ಚಕ್ರದಲ್ಲಿ ಸಿಲುಕಿದೆ ಅಂತ ಸೀನ್ ಕ್ರಿಯೇಟ್ ಮಾಡಿ ಅವಳನ್ನು ಕೊಲೆ ಮಾಡಿದ ಸ್ಥಳದಿಂದ ಸುಮಾರು 120 ಅಡಿ ದೂರದವರೆಗೆ ಬೈಕ್ ನಿಂದ ಎಳೆದುಕೊಂಡು ಹೋಗಿ ಅವಳು ಬೈಕ್ ಮೇಲಿನಿಂದ ಬಿದ್ದು ಸತ್ತುಹೋಗಿರುತ್ತಾಳೆ ಅಂತ ಅಪಘಾತದ ದೃಶ್ಯವನ್ನು
ಸೃಷ್ಟಿ ಮಾಡಿದ್ದು ನಂತರ ನಮ್ಮ ತನಿಖೆಯಲ್ಲಿ ಕಾಮಣ್ಣ ಹೊನಕಾಂಡೆ ಮತ್ತು ಜಯಶ್ರೀ ಹೊನಕಾಂಡೆ ಇವರು ಕಂಡುಬಂದಿದ್ದರಿಂದ ಮತ್ತು ಕೊಲೆಗೆ ಆರೋಪಿತರ ಮಗ ಸಂತೋಷ್ ಈತನು ಕೂಡ ದುಷ್ಪ್ರೇರಣೆ ನೀಡಿದ್ದು ಕಂಡುಬಂದಿದ್ದರಿಂದ ಇವತ್ತು ಅಥಣಿ ಪೊಲೀಸ್ ಠಾಣೆಯಲ್ಲಿ ಮೂರು ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.
ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡಿ ಬರ್ಬರವಾಗಿ ಹತ್ಯೆ ನಡೆಸಿ, ನಂತರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ ಹಂತಕರನ್ನು ಅಥಣಿ ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಮಲಾಬಾದ ಗ್ರಾಮದಲ್ಲಿ ಶನಿವಾರ ತಡರಾತ್ರಿ ಜರುಗಿದೆ.
ರೇಣುಕಾ ಸಂತೋಷ ಹೋನಕಾಂಡೆ (34 ) ಕೊಲೆಯಾಗಿರುವ ಮಹಿಳೆಯಾಗಿದ್ದು. ಶನಿವಾರ ತಡ ರಾತ್ರಿ 10 ಗಂಟೆ ಸುಮಾರಿಗೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಮಹಿಳೆಯ ಸಂಬಂಧಿಕರು ಅಥಣಿ ಪೊಲೀಸ್ ಠಾಣೆಯಲ್ಲಿ ಸಂಶಯಸ್ಪದ ದೂರು ಸಲ್ಲಿಸಿದ್ದಾರೆ.
ಮಹಿಳೆಯ ಗಂಡ, ಮಾವ, ಅತ್ತೆ ಸೇರಿದಂತೆ ಅವರ ಸಂಬಂಧಿಕರು ಸೇರಿ ಆರು ಜನ ಮಹಿಳೆಯನ್ನ ಕೊಲೆ ಮಾಡಿ, ರಸ್ತೆ ಅಪಘಾತದ ಕಥೆ ಕಟ್ಟುತ್ತಿದ್ದಾರೆ, ಅವರನ್ನ ಕೂಡಲೇ ಬಂಧಿಸಿ ತನಿಖೆಗೆ ಒಳಪಡಿಸಬೇಕೆಂದು ಹರೀಶ ಮಲ್ಲಿಕಾರ್ಜುನ ಹರಳಿ ಎಂಬವರು ದೂರು ಸಲ್ಲಿಸಿದ್ದಾರೆ.
ಈ ದೂರಿನ ಅನ್ವಯ ತಳಕ್ಕೆ ಧಾವಿಸಿದ ಅಥಣಿ ಪೊಲೀಸ್ ಕೊಲೆಯಾಗಿರುವ ಮಹಿಳೆಯ ಗಂಡ ಸಂತೋಷ ಹೊನಖಾoಡೆ, ಮಾವ ಕಾಮಣ್ಣ ಹೊನಖಾoಡೆ, ಅತ್ತೆ ಜಯಶ್ರೀ ಹೊನಖಾoಡೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಸ್ಥಳಕ್ಕೆ ಬೆಳಗಾವಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಅಥಣಿ ವಲಯದ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಸಿಪಿಐ ಸಂತೋಷ್ ಹಳ್ಳೂರ, ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ ಹಾಗೂ ಅವರ ಸಿಬ್ಬಂದಿ ಬೆಟ್ಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದು ರಸ್ತೆ ಅಪಘಾತವಲ್ಲ, ಇದೊಂದು ಕೊಲೆಯಾಗಿದ್ದು, ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಪ್ರಕರಣದ ಕಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸುವೆ.


