Select Page

Advertisement

ಅಥಣಿ – ಡಬಲ್ ಮರ್ಡರ್ ಗೆ ಬೆಚ್ಚಿಬಿದ್ದ ಗ್ರಾಮಸ್ಥರು

ಅಥಣಿ – ಡಬಲ್ ಮರ್ಡರ್ ಗೆ ಬೆಚ್ಚಿಬಿದ್ದ ಗ್ರಾಮಸ್ಥರು


ಅಥಣಿ : ಮದುವೆಯಾಗಿದ್ದ ಪತ್ನಿ‌ ಕೈ ಕೊಟ್ಟಿದ್ದಕ್ಕೆ ಹೆಂಡತಿ ಹಾಗೂ ಆಕೆಯ ಪ್ರಿಯತಮನನ್ನು ಮಾಜಿ ಪತಿ ಕೊಚ್ಚಿ ಕೊಲೆ ಮಾಡಿದ ದಾರುಣ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಹೊರವಲಯದಲ್ಲಿ ನಡೆದ ಡಬಲ್ ಮರ್ಡರ್ ಗೆ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದ್ದೆ.  ಘಟನೆಯಲ್ಲಿ ಯಾಸಿನ ಬಾಗೊಡೆ (21) ಹೀನಾಕೌಸರ್ (19) ಕೊಲೆಯಾದ ನವ ಜೋಡಿಗಳು. 

ಕೊಲೆಯನ್ನು ತಪ್ಪಿಸಲು ಅಮಿನಾಬಾಯಿ ಬಾಗೂಡ,  ಹಾಗೂ ಮುಸ್ತಫಾ ಮುಲ್ಲಾ ಮಧ್ಯೆ ಪ್ರವೇಶಿಸಿದಾಗ ಅವರು ಮೇಲು ಆರೋಪಿ ತೌಫಿಕ್ ಕ್ಯಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದು ಅವರನ್ನು ಮಹಾರಾಷ್ಟ್ರ ಮೀರಜ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

4 ತಿಂಗಳ ಹಿಂದೆ  ಹೀನಾಕೌಸರ ಹಾಗೂ ತೌಫಿಕ್ ನಡುವೆ ಮದುವೆ ನಡೆದಿತ್ತು. ಮದುವೆಯಾಗಿ ಒಂದೆ ತಿಂಗಳಿಗೆ ಕೊಲೆಯಾದ ಯಾಸಿನ ಜೋತೆ ಪ್ರಿತಿಸಿ ಹೀನಾಕೌಸರ ಓಡಿ ಹೋಗಿದ್ದಳು. ಒಂದುವರೆ ತಿಂಗಳ ಬಳಿಕ ಸಮಾಜದವ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿದ್ದ ಗ್ರಾಮಸ್ಥರು ಮಾಜಿ ಪತಿ ತೌಫಿಕ ಜೋತೆ ವಿವಾಹ ಮುರಿದು ಯಾಸಿನ್ ಜೋತೆ ಮಧುವೆ ಮಾಡಿಸಿದ್ದರು.

ಇಷ್ಟು ದಿನ ಸುಮ್ಮನಿದ್ದ ಆರೋಪಿ ತೌಫಿಕ ಇಂದು ಸಂಜೆ ಕೊಪದಲ್ಲಿ ಯಾಸಿನ್ ಹಾಗೂ ಹೀನಾಕೌಸರ ಮನೆಗೆ ತೆರಳಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ, ಸ್ಥಳಕ್ಕೆ ಐಗಳಿ ಪೊಲೀಸ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!