Select Page

Advertisement

ಅಥಣಿ : ಭೀಕರ ಅಪಘಾತದಲ್ಲಿ ಮೃತಪಟ್ಟ 6 ಜನರ ಸಾಮೂಹಿಕ ಅಂತ್ಯಕ್ರಿಯೆ, ಕಣ್ಣೀರಾದ ಗ್ರಾಮಸ್ಥರು

ಅಥಣಿ : ಭೀಕರ ಅಪಘಾತದಲ್ಲಿ ಮೃತಪಟ್ಟ 6 ಜನರ ಸಾಮೂಹಿಕ ಅಂತ್ಯಕ್ರಿಯೆ, ಕಣ್ಣೀರಾದ ಗ್ರಾಮಸ್ಥರು

ಅಥಣಿ : ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡು ಸ್ವಗ್ರಾಮಕ್ಕೆ ಆಗಮಿಸುತ್ತಿದ್ದ ವೇಳೆ ಲಾರಿ ಮತ್ತು ಕ್ರೂಜ‌ರ ವಾಹನದ ಮದ್ದಿ ರಸ್ತೆ ಅಪಘಾತವಾಗಿ ಕಡಪ-ಚಿತ್ತೂರು ರಸ್ತೆಯಲ್ಲಿ ಅಥಣಿ ತಾಲೂಕಿನ ಬಡಚಿ ಗ್ರಾಮದ ಒಂದೇ ಕುಟುಂಬದ ಐದು ಜನ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳನ್ನು ರವಿವಾರ ಮುಂಜಾನೆಯ ಬಡಚಿ ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಯಿತು.

ಸೆಪ್ಟಂಬರ್ 15 ರಂದು ನಶಿಕಿನ ಜಾವಾ ಜರುಗಿದ ಈ ದುರ್ಘಟನೆಯಲ್ಲ ಶೋಭಾ ಆಜೂರ (36), ಮಗಳು ಅಂಬಿಕಾ ಆಜೂರ(14) ಹನುಮಂತ ಆಜೂರ (42) ಹಾಗೂ ಪತ್ನಿ ಮಹಾನಂದಾ ಆಜೂರ(32), ಕ್ರೂಸರ ವಾಹನ ಚಾಲಕ ಹನುಮಂತ ಜಾಧವ ಸೇರಿ 5 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇನ್ನುಳಿದ 11 ಜನ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅದೇ ಅಪಘಾತದಲ್ಲಿ ಗಂಭೀರ ಗಾಯಗೊಂಡ ಕಸ್ತೂರಿ ಎಂಬುವವರು ಆಸ್ಪತ್ರೆಯಿಂದ ಬೆಳಗಾವಿಗೆ ಬರುವಾಗ ಶನಿವಾರ ರಾತ್ರಿ ರಸ್ತೆ ಮದ್ಯದಲ್ಲೇ ಕೊನೆಯುಸಿರು ಚೆಲ್ಲಿದ್ದಾಳೆ. ಹೀಗಾಗಿ ಈ ಘಟನೆಯಲ್ಲಿ ಮುಟ್ಟವರು ಪಟ್ಟವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

ರವಿವಾರ ಮುಂಜಾನೆ ಪಾರ್ಥಿವ ಶರೀರಗಳು
ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದಲ್ಲಿ ದುಃಖ ಮಡುಗಟ್ಟಿತ್ತು. ಗ್ರಾಮದಲ್ಲಿ ಬಸವೇಶ್ವರ ಜಾತ್ರೆಯ ಸಂಭ್ರಮದಲ್ಲಿ ಇರಬೇಕಾದ ಗ್ರಾಮಸ್ಥರಿಗೆ ಈ ದುರ್ಘಟನೆ ಸೂತಕದ ಛಾಯೆಯಾಗಿ ಪರಿಣಮಿಸಿತು.

ಮೃತರ ಸಾಮೂಹಿಕ ಅಂತ್ಯಕ್ರಿಯೆಯಲ್ಲಿ ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಅಂತ್ಯಕ್ರಿಯೆ ಸಂದರ್ಭದಲ್ಲಿ ಮಾಜಿ ಶಾಸಕ ಕುಮಠಳ್ಳಿ ಸೇರಿದಂತೆ ಅನೇಕ ಗಣ್ಯರು ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಬಡಚಿ ಗ್ರಾಮದಲ್ಲಿ ದುಃಖದ ವಾತಾವರಣ ಮಡುಗಟ್ಟಿತ್ತು.

ಫೋಟೋ ಶೀರ್ಷಿಕೆ : ಅಥಣಿ ತಾಲೂಕಿನ ಬಡಚಿ ಗ್ರಾಮದಲ್ಲಿ ಇತ್ತೀಚೆಗೆ ರಸ್ತೆಯ ಅಪಘಾತದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ರವಿವಾರ ಜರುಗಿತು. (17ಅಥಣಿ 03)

Advertisement

Leave a reply

Your email address will not be published. Required fields are marked *

error: Content is protected !!