ಅಥಣಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ; ಮನೆಗೆ ನುಗ್ಗಿ ಹಲ್ಲೆ
ಅಥಣಿ : ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆದುದ್ದು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ತಾಲೂಕಿನ ಸಂಬರಗಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ರೌಡಿಗಳ ಅಟ್ಟಹಾಸ ಮೆರೆದಿದ್ದು, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಬಲವಂತ ಟೋಣೆ ಎಂಬವರ ಮನೆಗೆ ನುಗ್ಗಿ ಮಹಿಳೆ ಮಕ್ಕಳು ಅನ್ನೋದನ್ನು ಲೆಕ್ಕಿಸದೆ ಚಾಕು , ಮಚ್ಚಿನಿಂದ ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವ ಘಟನೆ ಸಾರ್ವಜನಿಕರನ್ನು ಬೆಚ್ಚಿಬಿಳಿಸಿದೆ.
ಈ ರೌಡಿಗಳ ಅಟ್ಟಹಾಸದಲ್ಲಿ ಸಂಜಯ ಟೋಣೆ ಎಂಬತ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮಿರಜ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸೋಮವಾರ ತಡ ರಾತ್ರಿ ಸುಮಾರು ಐದು ಜನರ ಗುಂಪೊಂದು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬಲವಂತ ಟೋಣೆ ಎಂಬುವರ ಮನೆಯ ಮೇಲೆ ದಾದಾಸಾಹೇಬ ಟೋಣೆ, ರವಿ ಮಿಸಾಳ,ರಮೇಶ ಬೋಸಲೆ, ವಿಜಯ ನಾಟೆಕರ ,ಪಪ್ಪು ಬನ್ನೆ ಎಂಬುವರು ಹಳೆಯ ದ್ವೇಷದ ಕಾರಣಕ್ಕೆ ದಾಳಿ ಮಾಡಿ ಬಾಗಿಲು ಮುರಿದು ಮಹಿಳೆಯರು ಮಕ್ಕಳ ಸೇರಿದಂತೆ ಎಲ್ಲರ ಮೇಲೆ ಹಲ್ಲೆಗೆ ಯತ್ನಸಿದ್ದಾರೆ.
ಈ ವೇಳೆ ತಡೆಯಲು ಬಂದ ಸಂಜಯ ಟೋಣೆ ಎಂಬಾತನ ಹೊಟ್ಟೆಗೆ ಚಾಕುವಿನಿಂದ ಮೂರು ಬಾರಿ ಇರಿದು ಹಲ್ಲೆ ಮಾಡಿದ್ದಾರೆ. ಮಕ್ಕಳನ್ನು ಮನ ಬಂದಂತೆ ಎಸೆದು ಮಹಿಳೆಯರ ಮೇಲೂ ಹಲ್ಲೆಗೆ ಎತ್ನಿಸಿದ್ದಾರೆ. ಚಾಕು ಇರಿತದಿಂದ
ಸಂಜಯ ರಾಮಚಂದ್ರ ಟೋಣೆ ಗಂಭೀರ ಗಾಯಗೊಂಡಿದ್ದು, ಆತನನ್ನ ಮಿರಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಲ್ಲಿ ಬಲವಂತ ಟೋಣೆಯವರ ಮಾಲೀಕತ್ವದ ಚಿಕನ್ ಅಂಗಡಿಯನ್ನು ಸಂಪೂರ್ಣವಾಗಿ ದ್ವಂಸ ಮಾಡಿ , ಮನೆಯ ಮುಂದೆ ನಿಂತ 4 ಬೈಕಗಳನ್ನು ಹಾಳು ಮಾಡಿದ್ದು. ಪಿಕಪ್ ವಾಹನದ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಸಂಪೂರ್ಣವಾಗಿ ದ್ವಂಸ ಮಾಡಿದ್ದಾರೆ.
ಘಟಣೆ ತಿಳಿದು ಗ್ರಾಮಸ್ಥರು ಟೊಣೆ ಕುಟುಂಬದವರ ರಕ್ಷಣೆಗೆ ಮುಂದಾದಾಗ ಯಾರಾದರೂ ತಡೆಯಲು ಬಂದರೆ ಅವರನ್ನು ಸಹ ಮಚ್ಚಿನಿಂದ ಕೊಚ್ಚಿ ಹಾಕುವುದಾಗಿ ಬೆದರಿಸಿದ್ದಾರೆ. ಜನರು ಹೆಚ್ಚಿಗೆ ಜಮಾವಣಿಯಾಗುತ್ತಿದ್ದಂತೆ ಈ ರೌಡಿಗಳು ಅಲ್ಲಿಂದ ಓಡಿ ಹೋಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಅಥಣಿ ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ಗೀರಿಮಲ್ಲಪ್ಪಾ ಉಪ್ಪಾರ ಬೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಓರ್ವ ಆರೋಪಿಯನ್ನು ಬಂದಿಸಿದ್ದು, ಇನ್ನುಳಿದ ಆರೋಪಿಗಳು ಬಂಧನಕ್ಕೆ ಬಲೆ ಬೀಸಿದ್ದಾರೆ.


