ಅಥಣಿಯಲ್ಲಿ ಚಿನ್ನದಂಗಡಿ ದರೋಡೆಗೆ ಯತ್ನ ; ಗನ್ ತೋರಿಸಿದ ಕಿರಾತಕರು
ಅಥಣಿ : ಹಾಡಹಗಲೇ ಗನ್ ತೋರಿಸಿ ಚಿನ್ನದಂಗಡಿ ದರೋಡೆಗೆ ಯತ್ನ ನಡೆಸಿರುವ ಘಟನೆ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ತ್ರಿಮೂರ್ತಿ ಜ್ಯುವೆಲ್ಸ್ ನಲ್ಲಿ ಘಟನೆ ನಡೆದಿದ್ದು, ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಂದು ಗನ್ ತೋರಿಸಿ ಚಿನ್ನ ಕದಿಯಲು ಯತ್ನಿಸಲಾಗಿದೆ.
ಮಹೇಶ್ ಪೋತದಾರ(25) ಎಂಬುವವರಿಗೆ ಸೇರಿದ ಅಂಗಡಿಯಲ್ಲಿ, ಇಬ್ಬರು ಖದೀಮರಿಂದ ದರೋಡೆಗೆ ವಿಫಲ ಯತ್ನ ನಡೆಸಿದ್ದಾರೆ. ಅಂಗಡಿ ಮಾಲೀಕ ಕಿರುಚಿದ್ದರಿಂದ ಕಳ್ಳರು ಪರಾರಿಯಾಗಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

