Select Page

Advertisement

ಅಥಣಿ ಸರ್ಕಾರಿ ಆಸ್ಪತ್ರೆಗೆ ದಿನದ 24 ಗಂಟೆ ವಿದ್ಯುತ್ ಸೌಲಭ್ಯಕ್ಕೆ ಚಾಲನೆ

ಅಥಣಿ ಸರ್ಕಾರಿ ಆಸ್ಪತ್ರೆಗೆ ದಿನದ 24 ಗಂಟೆ ವಿದ್ಯುತ್ ಸೌಲಭ್ಯಕ್ಕೆ ಚಾಲನೆ

ಅಥಣಿ : ರಾಜ್ಯದ ಅತ್ಯುತ್ತಮ 10 ಸರ್ಕಾರಿ ಆಸ್ಪತ್ರೆಗಳಲ್ಲಿ  ಅಥಣಿ ಸಾರ್ವಜನಿಕ ಆಸ್ಪತ್ರೆ  ಇರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದ್ದು, ಶಾಸಕರ ವಿಶೇಷ ಕಾಳಜಿಯಿಂದ ಆಸ್ಪತ್ರೆಗೆ ಹೈಟೆಕ್ ಸೌಲಭ್ಯಗಳು ದೊರಕಿದ್ದು, ಇದರಿಂದ ಬಡ ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸಲು ಸಹಕಾರಿಯಾಗಿದೆ ಎಂದು  ತಾಲೂಕಾ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ ಹೇಳಿದರು.
 
ಅವರು ಶನಿವಾರ ಪಟ್ಟಣದ  ಹೆಸ್ಕಾಂ ಕಚೇರಿಯ ಆವರಣದಲ್ಲಿ  ಸರ್ಕಾರಿ ಆಸ್ಪತ್ರೆಗೆ  ದಿನದ 24 ಗಂಟೆಯ ವಿದ್ಯುತ್ ಸೇವೆಯ ಪೀಡರ್ ಗೆ ಚಾಲನೆ ನೀಡಿ ಮಾತನಾಡಿದರು. ಶಾಸಕ ಲಕ್ಷ್ಮಣ ಸವದಿ ಅವರ ವಿಶೇಷ ಕಾಳಜಿಯ ಫಲವಾಗಿ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾಲಿಸಿಸ್ ಘಟಕ, ಆಕ್ಸಿಜನ್ ಘಟಕ, ಹೈಟೆಕ್ ಪ್ರಯೋಗಾಲಯ, ಅಂಬುಲೆನ್ಸ್ ಸೇವೆ, ದಿನದ 24 ಗಂಟೆ  ಶುದ್ಧ ಕುಡಿಯುವ ನೀರಿಗಾಗಿ ಬೋರ್ವೆಲ್ ಮತ್ತು  ಜಲಸುದ್ಧೀಕರಣ ಘಟಕಕ್ಕೆ ದಿನದ 24 ಗಂಟೆ  ವಿದ್ಯುತ್ ಸಂಪರ್ಕ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.‌

ಕಳೆದ ಕೆಡಿಪಿ ಸಭೆಯಲ್ಲಿ  ಶಾಸಕರು ನೀಡಿದ ಸೂಚನೆಯ ಮೇರೆಗೆ  ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ  ಜಿ. ವ್ಹಿ. ಸಂಪಣ್ಣವರ ಹಾಗೂ ಅವರ ಸಿಬ್ಬಂದಿಗಳು ತ್ವರಿತಗತಿಯಲ್ಲಿ  ಕಾಮಗಾರಿಯನ್ನು ಪೂರ್ಣಗೊಳಿಸಿ  ಕಳೆದು ಒಂದು ವಾರದಿಂದ ಪ್ರಾಯೋಗಿಕವಾಗಿ  ದಿನದ 24 ಗಂಟೆ ವಿದ್ಯುತ್ ಸಂಪರ್ಕ ಒದಗಿಸಿದ್ದಾರೆ. ಇಂದು  ಅಧಿಕೃತ ಚಾಲನೆಗೆ ಮಾನ್ಯ ಶಾಸಕರು ಆಗಮಿಸಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದ ಅವರ ಅನುಪಸ್ಥಿತಿಯಲ್ಲಿ ಅವರ ಸಲಹೆಯಂತೆ  ನಾವಿಂದು  ಈ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡುತ್ತಿದ್ದೇವೆ ಎಂದರು.

ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ  ಮಾತನಾಡಿದ ಅಥಣಿ ಹೆಸ್ಕಾಂ ಉಪ ವಿಭಾಗದ  ಕಾರ್ಯನಿರ್ವಾಹಕ ಅಭಿಯಂತ  ಜಿ. ವಿ. ಸಂಪಣ್ಣವರ  ತಾಲೂಕಿನ ರೈತರಿಗೆ ಮತ್ತು ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು  ಸಕಾಲಕ್ಕೆ ದೊರಕಬೇಕು ಎಂಬ  ಉದ್ದೇಶದಿಂದ ಶಾಸಕರಾದ ಲಕ್ಷ್ಮಣ ಸವದಿ ಅವರು ಆರೋಗ್ಯ ಇಲಾಖೆಯಂತೆ ಹೆಸ್ಕಾಂ ಇಲಾಖೆಗೂ ಕೂಡ  ವಿಶೇಷ ಅನುದಾನವನ್ನು ಒದಗಿಸಿದ್ದಾರೆ. ಅವರ ಮಾರ್ಗದರ್ಶನನಂತೆ  ತಾಲೂಕಿನ ಎಲ್ಲಾ ವಿದ್ಯುತ್ ಘಟಕಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಹೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತ  ಸಿ ಆರ್ ಗುರುಸ್ವಾಮಿ, ಎ. ಎಸ್ ಮಾಕಾಣಿ, ಆರ್ ವೈ ಗುಗ್ರಿ, ಶಾಖಾಧಿಕಾರಿಗಳಾದ ಮಹಾಂತೇಶ ಅಂಬೋಳಿ, ಬಿ ಜಿ ಸನದಿ, ಎಸ್ ಎ ಪಾರ್ಥನಹಳ್ಳಿ, ಬಿಎಸ್ ಸನದಡ್ಡಿ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು. ಮಹಾಂತೇಶ ಅಂಬೋಳಿ ಸ್ವಾಗತಿಸಿದರು. ಅಶೋಕ ವಾಲೀಕಾರ  ನಿರೂಪಿಸಿದರು. ಪಿ ಬಿ ಸತ್ತಿ ವಂದಿಸಿದರು.ವಂದಿಸಿದರು

 #####

ಮುಂಬರುವ ದಿನಗಳಲ್ಲಿ ಅಥಣಿ ಸರಕಾರಿ ಆಸ್ಪತ್ರೆಗೆ  ಇನ್ನಷ್ಟು ಅಗತ್ಯ ಸೌಲಭ್ಯಗಳನ್ನು, ಯಂತ್ರೋಪಕರಣಗಳನ್ನು  ಒದಗಿಸುವ ಮೂಲಕ ಅತ್ಯಾಧುನಿಕ ಸೇವೆಗಳನ್ನು  ಒದಗಿಸಲು ಪ್ರಯತ್ನಿಸುತ್ತೇನೆ, ಶೀಘ್ರದಲ್ಲಿಯೇ ತಾಯಿ, ಮಕ್ಕಳ ಆಸ್ಪತ್ರೆಯ ಕಾಮಗಾರಿಗೆ  ಚಾಲನೆ ನೀಡಲಾಗುವುದು.

ಲಕ್ಷ್ಮಣ ಸವದಿ, 
ಶಾಸಕರು ಅಥಣಿ


 ####

ಶಾಸಕರ ವಿಶೇಷ ಕಾಳಜಿ  ಮತ್ತು ಆರೋಗ್ಯ ಇಲಾಖೆಯ  ತಜ್ಞ ವೈದ್ಯರ  ಮತ್ತು ಸಿಬ್ಬಂದಿಗಳ ಉತ್ತಮ ಸೇವೆಯಿಂದ ಅಥಣಿ ಸರ್ಕಾರಿ ಆಸ್ಪತ್ರೆ  ರಾಜ್ಯದಲ್ಲಿಯೇ ಮಾದರಿಯ ಆಸ್ಪತ್ರೆಯಾಗಿದೆ. ದಿನದ 24 ಗಂಟೆ  ಶುದ್ಧ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಹೊಂದಿರುವ ಜಿಲ್ಲೆಯ ಹೈಟೆಕ್ ಆಸ್ಪತ್ರೆಯಾಗಿದೆ. ತಾಲೂಕಿನ ಬಡ ರೋಗಿಗಳು  ಆಸ್ಪತ್ರೆಯ ಅತ್ಯಾಧುನಿಕ ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು..
 
ಡಾ. ಬಸಗೌಡ ಕಾಗೆ, 
ತಾಲೂಕ ವೈದ್ಯಾಧಿಕಾರಿ. ಅಥಣಿ


Advertisement

Leave a reply

Your email address will not be published. Required fields are marked *

error: Content is protected !!