ಅಥಣಿ : ಭೀಕರ ರಸ್ತೆ ಅಪಘಾತ, ಬಿಎಸ್ಎಫ್ ಯೋಧ ಸಾವು
ಅಥಣಿ : ಕಾರು ಹಾಗೂ ಬಸ್ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬಿಎಸ್ಎಫ್ ಯೋಧ ಸಾವಣಪ್ಪಿರುವ ಘಟನೆ ಸೋಮವಾರ ಅಥಣಿ – ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ರಿಯಾಜ್ ಮಿರಾಸಾಬ ಇನಾಮದಾರ (47 ) ಮೃತ ದುರ್ದೈವಿ. ಮೂಲತಃ ವಿಜಯಪುರ ಮೂಲದ ಈತನ ಕುಟುಂಬ ಸಾಂಗಲಿಗೆ ತೆರಳುವಾಗ ಘಟನೆ ಸಂಭವಿಸಿದೆ.
ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದರು. ಗಾಯಾಳುಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕು.


