Select Page

Advertisement

ಅಥಣಿ : ವಕೀಲರಿಂದ ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ

ಅಥಣಿ : ವಕೀಲರಿಂದ ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ

ಅಥಣಿ : ಭೂಮಿಯ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಇಬ್ಬರು ವಕೀಲರು ಸೇರಿಕೊಂಡು ಅಥಣಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಹಳ್ಯಾಳ ರಸ್ತೆಯ ಸ್ಮಶಾನದ ಹತ್ತಿರ ನಿರ್ಮಾಣವಾಗಿರುವ ಗೂಡ ಅಂಗಡಿಗಳನ್ನು ತೆರವುಗೊಳಿಸುವ ವಿಚಾರವಾಗಿ ನ್ಯಾಯವಾದಿ ಮಿತೇಶ್ ಪಟ್ಟಣ, ಶಶಿ ಬಾಡಗಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಅವರ ಮಧ್ಯೆ ಮಾತಿನ ವಾಗ್ವಾದವಾಗಿ ಮುಖ್ಯಾಧಿಕಾರಿ ಮೇಲೆ ಹಲೆಯಾಗಿದ್ದು, ಮುಖ್ಯ ಅಧಿಕಾರಿ ಅಶೋಕ ಗುಡಿಮನಿ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿ ಅಶೋಕ ಗುಡಿಮನಿ ನಾನು ಎಂದಿನಂತೆ ಪುರಸಭೆ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ನ್ಯಾಯವಾದಿ ಮಿತೇಶ ಪಟ್ಟಣ ಮತ್ತು ಶಶಿ ಬಾಡಗಿ ಅವರು ಹಳ್ಯಾಳ ರಸ್ತೆಯ ಸ್ಮಶಾನದ ಹತ್ತಿರ ನಿರ್ಮಾಣವಾಗಿರುವ ಗೂಡ ಅಂಗಡಿಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.

ಆಗ ನಾನು ಅವುಗಳ ತೆರವು ಕಾರ್ಯಚರಣೆಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದ್ದು, ಅದಕ್ಕೆ ಸ್ವಲ್ಪ ಸಮಯವಕಾಶ ಬೇಕಾಗುತ್ತದೆ ಎಂದು ತಿಳುವಳಿಕೆ ನೀಡಿದರೂ ಕೂಡ ನನ್ನ ಜೊತೆ ವಸತಿ ಬಗ್ಗೆ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.

ಈಗ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿದ್ದೇನೆ. ಇವತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಹೋಗುತ್ತೇನೆ. ನನಗೆ ಜೀವ ಬೆದರಿಕೆ ಇರುವುದರಿಂದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವ ಬಗ್ಗೆ ವಿಚಾರ ಮಾಡುತ್ತೇನೆ.ನನ್ನ ಕಾನೂನು ಹೋರಾಟ ನಾಳೆ ತಿಳಿಸುತ್ತೇನೆ ಎಂದರು.

Advertisement

Leave a reply

Your email address will not be published. Required fields are marked *

error: Content is protected !!