ಅಥಣಿ : ಕ್ಷೀರಭಾಗ್ಯ ಹಾಲಿನ ಪ್ಯಾಕೇಟ್ ಕದ್ದ ಮುಖ್ಯ ಶಿಕ್ಷಕ ಅಮಾನತು
ಅಥಣಿ : ಅಥಣಿ : ತಾಲೂಕಿನ ಗುಂಡೇವಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಸ್. ಕೆ ಕಾತ್ರಾಳ ಶಾಲೆಯ ಮಕ್ಕಳಿಗೆ ಸರ್ಕಾರದಿಂದ ಮಂಜೂರಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪ್ಯಾಕೆಟ್
ಗಳನ್ನು ಕದ್ದು ಅನಧಿಕೃತವಾಗಿ ಹೊರಗಡೆ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಮೊರಟಗಿ ಮುಖ್ಯ ಶಿಕ್ಷಕನನ್ನ ಅಮಾನತ್ತು ಗೊಳಿಸಿ ಆದೇಶ ಹೊರಡಿಸಿದ್ದಾರೆ.
ಹಾಲಿನ ಪ್ಯಾಕೆಟ್ಗಳನ್ನ ಕದ್ದು ಬೇರೆ ಕಡೆಗೆ ಅನಧಿಕೃತವಾಗಿ ಮಾರಾಟ ಮಾಡಲು ಪ್ರಯತ್ನಿಸಿದ ಮುಖ್ಯೋಪಾಧ್ಯಾಯನ ವಿಚಾರಣೆ ನಡೆಸಲಾಗಿತ್ತು. ಶಿಕ್ಷಕ ಮೇಲ್ನೋಟಕ್ಕೆ ತಪ್ಪು ಎಸಗಿರುವುದು ಕಂಡುಬಂದಿದ್ದು, ವಿಚಾರಣೆಯನ್ನು ಕಾಯ್ದಿರಿಸಿ ಅಮಾನತ್ತುಗೊಳಿಸಿದ್ದಾರೆ
ಏನಿದು ಪ್ರಕರಣ : ತಾಲೂಕಿನ ಗುಂಡೇವಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಹದೇವ ಕಾತ್ರಾಳ ಶಾಲೆಯ ಮಕ್ಕಳಿಗೆ ಸರ್ಕಾರದಿಂದ ಮಂಜೂರಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪ್ಯಾಕೆಟ್ ಗಳನ್ನ ಕದ್ದು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕೈಗೆ ಸಿಕ್ಕು ಬಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಗುಂಡೇವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಮೋರಟಗಿ ಬಿಸಿಯೂಟ ಯೋಜನೆಯ ದಾಖಲಾತಿಗಳನ್ನು ಪರಿಶೀಲಿಸಿದಾಗ ಶಾಲಾ ಮಕ್ಕಳಿಗೆ ಕೊಡಮಾಡುವ ಹಾಲಿನ ಪ್ಯಾಕೆಟ್ ಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಈ ಕುರಿತು ವಿಚಾರಣೆ ನಡೆಸಿದ ಸಂದರ್ಭದಲ್ಲಿ
ಶಾಲೆ ಮುಖ್ಯೋಪಾಧ್ಯಾಯ ತನ್ನ ಕಾರಿನಲ್ಲಿ 50 ಕೆ ಜಿ ಹಾಲಿನ ಪ್ಯಾಕೇಟ್ ಗಳ 2 ಗಂಟು ಇಟ್ಟುಕೊಂಡಿದ್ದು ಪತ್ತೆಯಾಗಿದೆ.
ಶಾಲೆಯ ಶಿಕ್ಷಕ ಕಾತ್ರಾಳ ಸರಿಯಾಗಿ ಬಿಸಿಯೂಟ ನೀಡುತ್ತಿಲ್ಲ. ಶಾಲೆಯಲ್ಲಿಯೇ ಬಿಸಿ ಊಟವನ್ನು ತಯಾರಿಸಲಾಗುತ್ತಿದ್ದು, ಬಿಸಿ ಊಟ ಕೂಡ ಗುಣಮಟ್ಟದಾಗಿ ಇರುವುದಿಲ್ಲ, ಪ್ರತಿ ದಿನ ತರಕಾರಿ ತರುವುದಿಲ್ಲ, ಮಕ್ಕಳಿಗೆ ಹಾಲು, ಹಣ್ಣು, ಶೇಂಗಾ ಚಕ್ಕಿ ಇನ್ನಿತರ ತಿನುಸುಗಳನ್ನು ಸರಿಯಾಗಿ ನೀಡುವುದಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

