ಅಥಣಿಯಲ್ಲಿ ಅಕ್ರಮ ಚಟುವಟಿಕೆ ತಡೆಗಟ್ಟಲು ವಿಫಲ : ಪರೋಕ್ಷವಾಗಿ ಸವದಿ ವಿರುದ್ಧ ಹರಿಹಾಯ್ದ ಕುಮಠಳ್ಳಿ
ಅಥಣಿ ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿವೆ. ಮಟಕಾ, ಕೊಲೆ, ದರೋಡೆ ಸೇರಿದಂತೆ ಇನ್ನಿತರ ಚಟುವಟಿಕೆಗಳು ನಡೆಯುತ್ತಿದ್ದರು, ಪೋಲಿಸ್ ಇಲಾಖೆ ಸರ್ಕಾರದ ನಿರ್ದೇಶನದಂತೆ ಠಾಣೆ ಎದುರು ನಿಂತು ಬೈಕ್ ಸವಾರರಿಗೆ ದಂಡ ಹಾಕುವಲ್ಲಿ ನಿರತರಾಗಿದ್ದಾರೆ
ಎಂದು ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಹರಿಹಾಯ್ದರು.
ಪಟ್ಟಣದ ಗೃಹ ಕಛೇರಿಯಲ್ಲಿ ಮಾತನಾಡಿದ ಅವರು. ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದ್ದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮತಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸಂರ್ಪೂಣ ಹದೆಗೆಟ್ಟಿದೆ ಎಂದು ಪೋಲಿಸರ ವಿರುದ್ದ ಬೇಸರ ವ್ಯಕ್ತಪಡಿಸಿದರು .
ರಾಜ್ಯದಲ್ಲಿ ಗ್ಯಾರಂಟಿಯೊಂದಿಗೆ ಅಭಿವೃದ್ಧಿ ಕಾಮಗಾರಿಗಳುನ್ನು ನಿಲ್ಲಿಸಬಾರದು. ಗ್ಯಾರಂಟಿ ಯೋಜನೆಗಾಗಿ ವಿವಿಧ ನಿಗಮ ಮಂಡಳಿಯ ಹಣ ಬಳಕೆ ಮಾಡಿದ್ದು ವಿಷಾದನಿಯ. ಅಂಬೇಡ್ಕರ್ ನಿಗಮ ಸೇರಿದಂತೆ ಅನೇಕ ನಿಗಮದ ಹಣ ಬಳಕೆ
ಮಾಡಿಕೊಂಡು ಕೆಲ ಸಮುದಾಯಕ್ಕೆ ಅನ್ಯಾಯ ಎಸಗಲಾಗಿದೆ.
ಗ್ಯಾರಂಟಿ ಹೆಸರಿನಲ್ಲೊ ಬೆಲೆ ಏರಿಕೆ ಮಾಡಿರುವದು ಖಂಡನೀಯ ಎಂದರು.
ಅಥಣಿಯಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿನ ಸಾಕಷ್ಟು ಕಾಮಗಾರಿಗಳು ಶುರುವಾಗದೆ ಹಾಗೆ ನಿಂತಿವೆ ಗುತ್ತಿಗೆದಾರ ಬಿಲ್ ಆಗದ ಕಾರಣ ಅರ್ದಕ್ಕೆ ಕಾಮಗಾರಿಗಳು ನಿಂತಿವೆ , ಅವಗಳನ್ನ ಶುರು ಮಾಡಿ ಕಾಮಗಾರಿಗಳನ್ನ ಮುಗಿಸುವತ್ತ ಸರಕಾರ ಚಿಂತನೆ ನಡೆಸಬೇಕು ಎಂದರು .ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.


