Select Page

Advertisement

ಅಥಣಿ ಯುವಕನ ಬರ್ಬರ ಹತ್ಯೆ ; ಬಸ್ ನಿಲ್ದಾಣದಲ್ಲಿ ಶವ ಪತ್ತೆ

ಅಥಣಿ ಯುವಕನ ಬರ್ಬರ ಹತ್ಯೆ ; ಬಸ್ ನಿಲ್ದಾಣದಲ್ಲಿ ಶವ ಪತ್ತೆ

ಅಥಣಿ : ಯುವಕನನ್ನು ಕೊಲೆ ಮಾಡಿ ಬಸ್ ನಿಲ್ದಾಣದಲ್ಲಿ ಶವ ಎಸೆದು ಪರಾರಿಯಾಗಿರುವ ಘಟನೆ ತಾಲೂಕಿನ ಅನಂತಪುರ ಗ್ರಾಮದಲ್ಲಿ ನಡೆದಿದೆ.

ಅಥಣಿ ತಾಲೂಕಿನ ಅನಂತಪುರ ಗ್ರಾಮದ ಹೊರವಲಯದ ಚೆನ್ನಮ್ಮ ಸರ್ಕಲ್ ನಲ್ಲಿರುವ ಬಸ್ ನಿಲ್ದಾಣದಲ್ಲಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.ನೆರೆಯ ಮದಭಾವಿ ಗ್ರಾಮದ ಅಪ್ಪಾಸಾಬ ಸಿದ್ದಪ್ಪ ಕಾಂಬಳೆ(37) ಮೃತ ದುರ್ದೈವಿಯಾಗಿದ್ದಾನೆ.

ಮೃತ ಅಪ್ಪಸಾಬ ನಿನ್ನೆ ಮಹಾರಾಷ್ಟ್ರಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದಾನೆ. ರಾತ್ರಿ 9:00 ಗಂಟೆ ಸುಮಾರಿಗೆ ಮಡದಿಗೆ ಫೋನ್ ಕರೆ ಮಾಡಿ ಮಶೀನ್ ರಿಪೇರಿ ಇದೆ ಇವತ್ತು ಊರಿಗೆ ಬರಲು ಆಗುವುದಿಲ್ಲ ಎಂದು ತಿಳಿಸಿದ್ದಾನೆ.

ಬೆಳಗಾಗುತ್ತಲೇ ಗಂಡ ಅಪ್ಪಾಸಾಬ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅಥಣಿ ಪೊಲೀಸ್ ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!