Select Page

Advertisement

ಅಥಣಿ : ಮಹಿಳೆ ಮೇಲೆ ಹಲ್ಲೆಯಾದರು ಪ್ರಕರಣ ದಾಖಲಿಸಲು ಹಿಂದೇಟು ; ಪೊಲೀಸ್ ಅಧಿಕಾರಿ ಒತ್ತಡ ಆರೋಪ…?

ಅಥಣಿ : ಮಹಿಳೆ ಮೇಲೆ ಹಲ್ಲೆಯಾದರು ಪ್ರಕರಣ ದಾಖಲಿಸಲು ಹಿಂದೇಟು ; ಪೊಲೀಸ್ ಅಧಿಕಾರಿ ಒತ್ತಡ ಆರೋಪ…?

ಬೆಳಗಾವಿ : ಬಾವಿಯಲ್ಲಿನ ನೀರು ಬಳಕೆ ಮಾಡಿದ್ದಕ್ಕೆ ಕುಟುಂಬದ ಸದಸ್ಯರನ್ನು ಮನಬಂದಂತೆ ಥಳಿಸಿ ಮಹಿಳೆ ಮೇಲೆ ಹಲ್ಲೆಯಾದರು ಘಟನೆ ಕುರಿತು ಐಗಳಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದ ಆರೋಪ ಕೇಳಿಬಂದಿದೆ‌.

ಕಳೆದ ಎಪ್ರಿಲ್ 12 ರಂದು ಅದೇ ಐಗಳಿ ಗ್ರಾಮದ ನಕುಸಾ ಸೈಯದ್ ಗದಾಡೆ ಎಂಬುವವರ ಪತಿ ಹಾಗೂ ಮಗನ ಮೇಲೆ 14 ಜನ ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ ಘಟನೆ ಕುರಿತು ಪ್ರಕರಣ ದಾಖಲಿಸಲು ಐಗಳಿ ಪೊಲೀಸರು ಹಿಂದೇಟು ಹಾಕುತ್ತಿದ್ದು ಇದರ ಹಿಂದೆ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರ ಒತ್ತಡ ಇರುವ ಸಂಶಯ ಮೂಡುತ್ತಿದೆ.

ಮಾರಣಾಂತಿಕ ಹಲ್ಲೆ ನಡೆದರು ಪೊಲೀಸರು ಮಾತ್ರ ತಮಗೆ ಸಂಬಂಧ ಇಲ್ಲದಂತೆ ವರ್ತನೆ ಮಾಡುತ್ತಿದ್ದು ಇದರಿಂದ ಸಂತ್ರಸ್ತ ಕುಟುಂಬ ಭಯದಲ್ಲೇ ಜೀವನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಒತ್ತಡ ಹೇರಿರುವ ಆರೋಪ ಕೇಳಿಬಂದಿದೆ.

Advertisement

Leave a reply

Your email address will not be published. Required fields are marked *

error: Content is protected !!