ಅಥಣಿ : ವಾಟ್ಸಪ್ ನಲ್ಲಿ ಅಶ್ಲೀಲ ವೀಡಿಯೋ ಹರಿಬಿಟ್ಟ ಕಾಂಗ್ರೆಸ್ ಮುಖಂಡ
ಅಥಣಿ : ಕಾಂಗ್ರೆಸ್ ಮುಖಂಡನೋರ್ವ ವಿದ್ಯಾರ್ಥಿಗಳು ಇರುವ ಗ್ರುಪ್ ಸೇರಿದಂತೆ ಅನೇಕ ವಾಟ್ಸಪ್ ಗ್ರುಪ್ ಗಳಲ್ಲಿ ಅಶ್ಲೀಲ ವೀಡಿಯೋ ಹರಿಬಿಟ್ಟ ಘಟನೆ ಬೆಳಕಿಗೆ ಬಂದಿದ್ದು ಆರೋಪಿಗೆ ಶಿಕ್ಷೆ ಆಗುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಥಣಿ ತಾಲೂಕಿನ ಮಲಾಬಾದ ಗ್ರಾಮದ ಮಹಾದೇವ ಮಾನೆ ಎಂಬ ಕಾಂಗ್ರೆಸ್ ಮುಖಂಡನಿಂದ ಆಚಾತುರ್ಯ ನಡೆದಿದ್ದು, ಅನೇಕ ಗ್ರುಪ್ ಗಳಲ್ಲಿ ಅಶ್ಲೀಲ ವೀಡಿಯೋ ಹರಿಬಿಟ್ಟಿದ್ದಾನೆ. ಸಧ್ಯ ಇತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಥಣಿ ಪೊಲೀಸರಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಲಿಂಕ್ ಒಪನ್ ಮಾಡಿದ್ದಕ್ಕೆ ನಡೆಯಿತಾ ಅವಾಂತರ : ಸಧ್ಯ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕೊಂಚ ಮೈ ಮರೆತರು ಆಗುವ ಅನಾಹುತಹ ಎಂತಹದು ಎಂಬುದು ಸ್ಪಷ್ಟ.
ಅಶ್ಲೀಲ ಯುವತಿಯರ ಚಿತ್ರವಿರುವ ಒಂದು ಲಿಂಕ್ ಬರುತ್ತದೆ. ಇದನ್ನು ಓಪನ್ ಮಾಡುತ್ತಿದ್ದಂತೆ ವ್ಯಕ್ತಿಯ ಮೋಬೈಲ್ ಹ್ಯಾಕ್ ಆಗುವ ಮೂಲಕ ಬ್ಯಾಂಕ್ ಅಕಂಟ್ ಲಿಂಕ್ ಇದ್ದರೆ ಇದರ ಹಣ ಕೂಡಾ ತಗೆದುಕೊಳ್ಳುತ್ತಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಉಪಯೋಗಿಸುವವರು ಕೊಂಚ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಮೈ ಮರೆತರು ಮಾನ ಹರಾಜು ಆಗುವ ಸಾಧ್ಯತೆ ಇರುತ್ತದೆ.


