ಅಥಣಿ : ಚಿರತೆ ಭೀತಿಯಲ್ಲಿ ಝಂಜರವಾಡದ ಜನ ; ಏನು ಹೇಳಿದ್ರು ಅರಣ್ಯ ಇಲಾಖೆ ಅಧಿಕಾರಿಗಳು…?
ಅಥಣಿ : ತಾಲೂಕಿನ ಝಂಜರವಾಡ ಗ್ರಾಮದಲ್ಲಿ ಚಿರತೆ ಭೀತಿ ಎದುರಾಗಿದ್ದು ಗ್ರಾಮಸ್ಥರಲ್ಲಿ ಭಯ ಆವರಿಸಿದೆ. ದಿನರಾತ್ರಿ ಮನೆ ಮುಂದಿರುವ ಪ್ರಾಣಿಗಳ ಅನುಮಾನಾಸ್ಪದ ಸಾವು ಗ್ರಾಮಸ್ಥರನ್ನು ಚಿಂತನೆ ತಳ್ಳಿದೆ.
ಚಿರತೆ ಭೀತಿ ಹಿನ್ನಲೆಯಲ್ಲಿ ಝಂಜರವಾಡ ಗ್ರಾಮಕ್ಕೆ ಅರಣ್ಯ ಇಲಾಖೆ ಅಧಿಕಾರಿ ರಾಕೇಶ್ ಅರ್ಜುನವಾಡಿ ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅನುಮಾನಾಸ್ಪದವಾಗಿ ಸುತ್ತಾಡುತ್ತಿರುವ ಪ್ರಾಣಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಜನರಿಗೆ ಧೈರ್ಯದಿಂದ ಇರುವಂತೆ ತಿಳಿಸಿದ್ದು ಅನುಮಾನ ಮೂಡಿಸಿರುವ ಜಾಗದಲ್ಲಿ ನಾಲ್ವರು ಅರಣ್ಯ ಇಲಾಖೆ ಸಿಬ್ಬಂದಿ ನೇಮಕ ಮಾಡಿದ್ದಾರೆ. ಜೊತೆಗೆ ಕೊಬಿಂಗ್ ಕಾರ್ಯಾಚರಣೆ ಮುಂದುವರೆದಿದೆ.

