ಅಥಣಿಯಲ್ಲಿ ದುರ್ಘಟನೆ ; ಕಬ್ಬು ತುಂಬಿದ್ದ ಟ್ರಾಲಿ ಪಲ್ಟಿಯಾಗಿ ವ್ಯಕ್ತಿ ಸಾವು
ಅಥಣಿ : ಕಬ್ಬು ತುಂಬಿದ ಟ್ರಾಲಿ ಪಲ್ಟಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲ್ಲಮವಾಡಿ ಗ್ರಾಮದಲ್ಲಿ ನಡೆದಿದೆ.
ತೇಲಸಂಗ ಗ್ರಾಮದ ರಾಮಪ್ಫ ನಿಂಗಪ್ಪ ಸಾವಳಗಿ (40) ಮೃತ ದುರ್ದೈವಿ. ಅಮಾವಾಸ್ಯೆ ಹಿನ್ನೆಲೆ ಯಲ್ಲಮ್ಮ ದೇವಿ ದರ್ಶನ ಮುಗಿಸಿಕೊಂಡು ಹಿಂದಿರುವಾಗ ದುರ್ಘಟನೆ ಸಂಭವಿಸಿದೆ.
ಸಾವಳಗಿ ಅಥಣಿ ರಾಜ್ಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು ಈ ವೇಳೆ ಕಬ್ಬು ತುಂಬಿಕೊಂಡು ಬಂದ ಟ್ರಾಕ್ಟರ್ ಪಕ್ಕದ ಗುಂಡಿಗೆ ಇಳಿದಾಗ ಬೈಕ್ ಸವಾರನ ಮೇಲೆ ಪಲ್ಟಿಯಾಗಿದೆ.
ಇನ್ನು ಸ್ಥಳಕ್ಕೆ ಐಗಳಿ ಪೊಲೀಸ್ ಬೇಟಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


