Select Page

Advertisement

ಜೊಲ್ಲೆ ಕ್ಯಾಂಪಿನ ಪಿಕೆಪಿಎಸ್ ಸದಸ್ಯರ ನಡುವೆ ಜಗಳ ; ಮನೆಗೆ ಬಿಡದಿದ್ದರೆ ಓಡಿ ಹೋಗುತ್ತೇವೆ ಎಂದು ಎಚ್ಚರಿಕೆ..?

ಜೊಲ್ಲೆ ಕ್ಯಾಂಪಿನ ಪಿಕೆಪಿಎಸ್ ಸದಸ್ಯರ ನಡುವೆ ಜಗಳ ; ಮನೆಗೆ ಬಿಡದಿದ್ದರೆ ಓಡಿ ಹೋಗುತ್ತೇವೆ ಎಂದು ಎಚ್ಚರಿಕೆ..?

ಬೆಳಗಾವಿ : ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆ ಕಣ ರಂಗೇರಿದ್ದು ನಿಪ್ಪಾಣಿಯಿಂದ ಸ್ಪರ್ಧೆ ಮಾಡಿರುವ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ತಾಲೂಕಿನ‌ ಪಿಕೆಪಿಎಸ್ ಸದಸ್ಯ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸ ಪಡುವಂತಾಗಿದೆ.

ಜೊಲ್ಲೆ ಕ್ಯಾಂಪಿನಲ್ಲಿದ್ದ ಪಿಕೆಪಿಎಸ್ ಸದಸ್ಯರ ನಡುವೆ ಜಗಳ ಏರ್ಪಟ್ಟಿದ್ದು, ಒಬ್ಬರಿಗೊಬ್ಬರು ಬೈದಾಡಿಕೊಂಡ‌ ಪ್ರಸಂಗವೂ ನಡೆದಿದೆ. ಈ‌ ಮಧ್ಯೆ ನಮ್ಮನ್ನು ಇಲ್ಲಿಂದ ಬಿಟ್ಟುಬಿಡಿ, ಇಲ್ಲದಿದ್ದರೆ ನಾವೇ ಓಡಿ ಹೋಗುತ್ತೇವೆ ಎಂಬ ಎಚ್ಚರಿಕೆಯನ್ನೂ ಸದಸ್ಯರು ನೀಡುತ್ತಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

ನಿಪ್ಪಾಣಿ ತಾಲೂಕಿನ ಹಲವು ಪಿಕೆಪಿಎಸ್ ನಲ್ಲಿ ಡೆಲಿಗೆಟ್ ಪಡೆಯುವ ವೇಳೆ ಉತ್ತಮ ಪಾಟೀಲ ಅವರನ್ನೇ ಬೆಂಬಲಿಸುವ ನಿರ್ಧಾರಕ್ಕೆ ಮತದಾರರು ಬಂದಿದ್ದರಂತೆ. ಆದರೆ ಈಗ ಹಣದ ಆಸೆಯಿಂದ ಜೊಲ್ಲೆ ಜೊತೆ ಸೇರಿದ್ದು ಇದರಿಂದ ಡೆಲಿಗೆಟ್ ಗಳು ನಮ್ಮ ಮಾತು ತಪ್ಪಿದ್ದಾರೆ ಎಂದು ಪಿಕೆಪಿಎಸ್ ಸದಸ್ಯರು ಆರೋಪಿಸುತ್ತಿದ್ದಾರೆ.

ಸಧ್ಯ ಜೊಲ್ಲೆ ಹಿಡಿತದಲ್ಲಿರುವ ಪಿಕೆಪಿಎಸ್ ಸದಸ್ಯ ಮತದಾರರಿಗೆ ತಮ್ಮ ಗ್ರಾಮದ ಸದಸ್ಯರಿಂದ ಕರೆ ಬರುತ್ತಿದ್ದು, ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸದಸ್ಯರ ನಡುವೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಒಕ್ಕೂಟದ ನಿರ್ಧಾರಕ್ಕೆ ಚ್ಯುತಿ ತಂದ ಪಿಕೆಪಿಎಸ್ ಡೆಲಿಗೆಟ್ ವಿರುದ್ಧ ನಿಪ್ಪಾಣಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ‌ಸ್ವತ: ರೈತರೇ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಪಿಕೆಪಿಎಸ್ ಮತದಾರರು ಕಂಗಾಲಾಗಿದ್ದಾರೆ.

ಸದಸ್ಯರ ನಡುವಿನ ಜಗಳ ಬಿಡಿಸಲು ಜೊಲ್ಲೆ ಟೀಂ‌ ಹೈರಾಣಾಗಿರುವುದುವಂತು ಸತ್ಯ. ಅಕ್ಟೋಬರ್ 19 ರಂದು ಚುನಾವಣೆ ನಡೆಯಲಿದ್ದು ಅಡ್ಡ ಮತದಾನದ ಭೀತಿಯಲ್ಲಿ ನಾಯಕರು ಇರುವುದು ಸ್ಪಷ್ಟವಾಗಿದೆ.

ಕಾಗವಾಡದಲ್ಲಿ ಕಲಹ : ಶಾಸಕ ರಾಜು ಕಾಗೆ ಅವಿರೋಧ ಆಯ್ಕೆ ವಿಚಾರವಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲ್ ವಿರುದ್ಧ ಅನೇಕ ಪಿಕೆಪಿಎಸ್ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ನಾವು ನಿಮ್ಮ ಬೆಂಬಲಕ್ಕೆ ನಿಲ್ಲುವ ವಿಶ್ವಾಸ ನೀಡಿದ್ದೇವು ಆದರೆ ಏಕಾಏಕಿ ನಾಮಪತ್ರ ವಾಪಸ್ ಪಡೆಯುವ ಮೂಲಕ ನಮಗೆ ಅವಮಾನ ಮಾಡಿದ್ದೀರಿ ಎಂದು ಅನೇಕರು ಸಿಟ್ಟು ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.



Advertisement

Leave a reply

Your email address will not be published. Required fields are marked *

error: Content is protected !!