Select Page

Advertisement

ಭೀಕರ ರಸ್ತೆ ಅಪಘಾತ ; ಅಥಣಿ ಮೂಲದ ಮೂವರು ಮಹಿಳೆಯರ ಸಾವು

ಭೀಕರ ರಸ್ತೆ ಅಪಘಾತ ; ಅಥಣಿ ಮೂಲದ ಮೂವರು ಮಹಿಳೆಯರ ಸಾವು

ಅಥಣಿ : ಮಹಾರಾಷ್ಟ್ರದ ಸಾಂಗೋಲಾ- ಜತ್ತ ಮಾರ್ಗದ ಬಳಿ  ಕ್ರೋಜರ್ ವಾಹನ ಪಲ್ಟಿಯಾಗಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಮಹಿಳೆಯರು ಕೂಲಿ ಆರಿಸಿ ದೂರದ ಸಾಂಗೋಲಾ ಕಡೆಗೆ ಹೋಗುವಾಗ ರಸ್ತೆ ಮಧ್ಯೆ  ಅವಘಡ ಸಂಭವಿಸಿದೆ.

ಬಳ್ಳಿಗೇರಿ ಗ್ರಾಮದ ನಿವಾಸಿಗಳಾದ ಮಹಾದೇವಿ ಚೌಗಲಾ, ಗೀತಾ ದೊಡಮನಿ, ಮಲಬಾದ ಗ್ರಾಮದ ಕಸ್ತೂರಿ ಮೃತ ದುರ್ದೈವಿಗಳು.ಇನ್ನು ಇಬ್ಬರ ಸ್ಥಿತಿ ಗಂಭೀರವಾಗಿದ್ದು ಅವರನ್ನ ಮಿರಜ್ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕ್ರೂಸರ್ ವಾಹನದ ಎಡಬದಿಯ ಟೈರ್ ಬ್ಲ್ಯಾಸ್ಟ್  ಆದ ಪರಿಣಾಮ ವಾಹನ ಪಲ್ಟಿಯಾಗಿದೆ.

ಕೆಎ 24 ಎಮ್1121 ಸಂಖ್ಯೆಯ ವಾಹನ ಪಲ್ಟಿಯಾಗಿದೆ ಕ್ರೂಸರ್ ಪಲ್ಟಿಯಾದ ಪರಿಣಾಮ ಮೂವರು ಸಾವು ಹಲವರಿಗೆ ಗಂಭೀರ ಗಾಯಗಳಾಗಿವೆ.ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯರನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Advertisement

Leave a reply

Your email address will not be published. Required fields are marked *

error: Content is protected !!