ಕೋಲಾರ : 30 ಸಾವಿರ ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳು ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಮಾಲೂರು ತಾಲೂಕು ಕಚೇರಿಯಲ್ಲಿ ನಡೆದಿದೆ.

ಭೂ ದಾಖಲೆಗಳ ವಿಭಾಗದ ಸಹಾಯಕ ನಿದೇರ್ಶಕಿ ಅಶ್ವಿನಿ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ್ ಎಂಬ ಅಧಿಕಾರಿಗಳು ಲೋಕಾ ಬಲೆಗೆ ಬಿದ್ದಿದ್ದಾರೆ. ಭೂ ಪರಿವರ್ತನೆಗೆ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಹೊಸಕೋಟೆಯ ಮಂಜುನಾಥ್ ಎಂಬುವವರ ಬಳಿ ಲಂಚ ಪಡೆಯುವ ವೇಳೆಯೇ ರೇಡ್ ಮಾಡಲಾಗಿದೆ. ಲೋಕಾಯುಕ್ತ ಎಸ್​​​​​ಪಿ ಉಮೇಶ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.