Select Page

Advertisement

ಇತಿಹಾಸ ಸೃಷ್ಟಿಸಿದ ಪ್ರಧಾನಿ ನರೇಂದ್ರ ಮೋದಿ ; ಸಂಪೂರ್ಣ ಮಾಹಿತಿ ನೋಡಿ

ಇತಿಹಾಸ ಸೃಷ್ಟಿಸಿದ ಪ್ರಧಾನಿ ನರೇಂದ್ರ ಮೋದಿ ; ಸಂಪೂರ್ಣ ಮಾಹಿತಿ ನೋಡಿ

ಬೆಂಗಳೂರು : ಲೋಕಸಭಾ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ನಾಳೆ 7ನೇ ಹಂತದ ಮತದಾನ ನಡೆಯಲಿದೆ. ದೇಶದಾದ್ಯಂತ ಅಬ್ಬರದ ಪ್ರಚಾರ ನಡೆಸಿರುವ ಪ್ರಧಾನಿ ಮೋದಿ, ನಿನ್ನೆ ಪಂಜಾಬ್‍ನ ಹೋಶಿಯಾಪುರ್‌ದಲ್ಲಿ ತಮ್ಮ ಕೊನೆಯ ಪ್ರಚಾರ ಸಭೆ ನಡೆಸಿದರು.

2024ರ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾದ ನಂತರ ಮೋದಿ ಅವರು 76 ದಿನಗಳಲ್ಲಿ ರೋಡ್ ಶೋ, ರ್ಯಾಲಿ, ಬಹಿರಂಗ ಪ್ರಚಾರ ಸೇರಿದಂತೆ ಒಟ್ಟು 206 ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗಿಯಾಗಿ, ಬಿಜೆಪಿ ಅಭ್ಯರ್ಥಿಗಳ ಮತಬೇಟೆಯಾಡಿದ್ದಾರೆ.

2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಶೇ.40ರಷ್ಟು ಹೆಚ್ಚಿನ ಸಮಾವೇಷಗಳಲ್ಲಿ ಭಾಗಿಯಾಗಿದ್ದಾರೆ. 2019ರ ಚುನಾವಣೆಯಲ್ಲಿ ಮೋದಿ ಅವರು 68 ದಿನಗಳ ಕಾಲ 14 ಸಾರ್ವಜನಿಕ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು.

73 ವರ್ಷದ ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರದ ಸಭೆಗಳು ಮಾತ್ರವಲ್ಲದೇ, 80 ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಮತದಾನ ಆರಂಭವಾದಾಗಿನಿಂದ ಅವರು ಪ್ರತಿದಿನ ಸರಾಸರಿ ಒಂದಕ್ಕಿಂತ ಹೆಚ್ಚು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ.

7 ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಸುದೀರ್ಘ ಪ್ರಚಾರ ನಡೆಸಿದ ಪ್ರಧಾನಿ, ಎರಡು ದಿನ ಕನ್ಯಾಕುಮಾರಿ ವಿವೇಕಾನಂದ ಸ್ಮಾರಕದಲ್ಲಿ 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ. ಜೂನ್ 1 ರಂದು ಮಧ್ಯಾಹ್ನ 3 ಗಂಟೆಯವರೆಗೆ ಕನ್ಯಾಕುಮಾರಿಯಲ್ಲೇ ಇರಲಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!