ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದ ನಟ ಶಿವಣ್ಣ ದಂಪತಿ
ಸವದತ್ತಿ : ಕನ್ನಡ ಚಿತ್ರರಂಗದ ಖ್ಯಾತ ನಟ ಡಾ. ಶಿವರಾಜ್ ಕುಮಾರ್ ದಂಪತಿಗಳು ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು.
ಬುಧವಾರ ಯರಗಟ್ಟಿ ಸಮೀಪದ ಚಚಡಿ ಗ್ರಾಮದಲ್ಲಿ ಉತ್ತರಕಾಂಡ ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಂಡು ದೇವಿಯ ದರ್ಶನ ಪಡೆದು ಸಂತಸ ಹಂಚಿಕೊಂಡಿದ್ದಾರೆ.
ಹಿಂದೆ ಶ್ರೀರಾಮ್, ಮೈಲಾರಿ ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳ ಪಾಲಿಗೂ ಸವದತ್ತಿ ಯಲ್ಲಮ್ಮ ದೇವಿ ಆಶಿರ್ವಾದ ಇತ್ತು . ಹಾಗಾಗಿ ಉತ್ತರಕಾಂಡದ ಚಿತ್ರೀಕರಣದ ನಂತರ ಶಿವಣ್ಣ ತಾಯಿ ಆಶಿರ್ವಾದವನ್ನು ಪಡೆದಿರುತ್ತಾರೆ.
ಕೆ.ಆರ್.ಜಿ. ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸಿರುವ “ಉತ್ತರಕಾಂಡ” ರೋಹಿತ್ ಪದಕಿ ನಿರ್ದೇಶನದ ಬಹು ನಿರೀಕ್ಷಿತ ಆಕ್ಷನ್ ಡ್ರಾಮಾ ಚಿತ್ರವಾಗಿದೆ.
ಈ ವೇಳೆ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ವಾಯ್ ವಾಯ್ ಕಾಳಪ್ಪನವರ, ದೇವಸ್ಥಾನ ಅರ್ಚಕರು ಸೇರಿದಂತೆ ಅನೇಕ ಇದ್ದರು.


