ಪಿಯುಸಿಯಲ್ಲಿ ರಾಜ್ಯಕ್ಕೆ ಐದನೇ ರ್ಯಾಂಕ್ ಪಡೆದ ಸವದತ್ತಿಯ ವಿದ್ಯಾರ್ಥಿನಿ ವಿಜಯಲಕ್ಷ್ಮಿ
ಸವದತ್ತಿ : ಇಲ್ಲಿನ ಕುಮಾರೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಪಟ್ಟದಕಲ್ಲ ಓಣಿಯ ನಿವಾಸಿ ಕುಮಾರಿ ವಿಜಯಲಕ್ಷ್ಮಿ ಕೊಟ್ರೆಪ್ಪ ಗುಲಗಂಜಿ ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 592 (ಶೇ 98.66%)ರಷ್ಟು ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದಾರೆ.
ಕನ್ನಡ ಭೂಗೋಳಶಾಸ್ತ್ರ ಶಿಕ್ಷಣ ಶಾಸ್ತ್ರ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿರುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ, ನನ್ನ ಸಾಧನೆಗೆ ನನ್ನ ಶಿಕ್ಷಕರ ಪ್ರೋತ್ಸಾಹವೇ ಕಾರಣ. ಅವರ ಪ್ರೋತ್ಸಾಹದಿಂದ ಇಂದು ಈ ಸಾಧನೆ ಮಾಡಿದ್ದೇನೆ. ಮುಂದೆ ಐಎಎಸ್ ಮಾಡಿ ಸಮಾಜಕ್ಕೆ ಒಳ್ಳೆಯ ಸೇವೆಯನ್ನು ಕೊಡುವುದರ ಜೊತೆಗೆ ಮಾದರಿ ಅಧಿಕಾರಿಯಾಗುವ ಆಸೆ ಹೊಂದಿದ್ದೇನೆ ಎಂದಿದ್ದಾರೆ.
ತಂದೆ ತಾಯಿ ಒಕ್ಕೂಲುತನ ಬಡತನದ ನಡುವೆಯೂ ಬಹಳಷ್ಟು ಕಷ್ಟಪಟ್ಟು ಅಧ್ಯಯನ ಮಾಡಿ ಸಾಧನೆ ಮಾಡಿರುವುದು ಹೆಮ್ಮೆಪಡುವ ಸಂಗತಿಯಾಗಿದೆ. ತಂದೆ ತಾಯಿ, ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.


