Select Page

ರಾಜಕೀಯ ಪಕ್ಷದ ಪರ ಪೋಸ್ಟ್ ; ಶಿಕ್ಷಣ ಇಲಾಖೆ ನೌಕರ ಸಸ್ಪೆಂಡ್..!

ರಾಜಕೀಯ ಪಕ್ಷದ ಪರ ಪೋಸ್ಟ್ ; ಶಿಕ್ಷಣ ಇಲಾಖೆ ನೌಕರ ಸಸ್ಪೆಂಡ್..!

ಹಾಸನ:- ಸಂದೇಶದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ ಆರೋಪದ ಮೇಲೆ ಹಾಸನದ ಡಿಡಿಪಿಐ ಕಛೇರಿಯ ಎಫ್.ಡಿ.ಎ ಬಿ.ಎಚ್. ಮಂಜುನಾಥ್ ಅವರನ್ನ ಸಸ್ಪೆಂಡ್ ಮಾಡಲಾಗಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತು ಮಾಡಿದ್ದು, 24 ಗಂಟೆಗಳೊಳಗಾಗಿ ಮಾಹಿತಿ ಒದಗಿಸಿ ಎಂದು ಎ.ಡಿ.ಸಿ ಶಾಂತಲಾ ಅವರು ನೋಟಿಸ್ ಜಾರಿ ಮಾಡಿದ್ದರಂತೆ.

ಬಿಜೆಪಿ ಪಕ್ಷದ ಪರ ವಾಟ್ಸಾಪ್ ಗ್ರೂಪ್​​ನಲ್ಲಿ ಸಂದೇಶ ಕಳಿಸಿ ಪ್ರಚಾರ ನಡೆಸಿರುವ ಬಗ್ಗೆ ನಾಗೇಂದ್ರ ಎಂಬುವರು ದೂರು ನೀಡಿದ್ದರಂತೆ. ಪ್ರಕರಣದ ಬಗ್ಗೆ ಮಂಜುನಾಥ ಅವರ ವಿವರಣೆ ಹಾಗೂ ಡಿಸಿಪಿಐ ವರದಿ ಆದರಿಸಿ ಅಮಾನತು ಮಾಡಲಾಗಿದೆ. ಇಲಾಖಾ ತನಿಖೆ ಕಾಯ್ದಿರಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!