Select Page

Advertisement

ರಾಹುಲ್ ಗಾಂಧಿ ಅಭಿಮಾನಿ ಇಟ್ಟ ಬೇಡಿಕೆಗೆ ವರ ನೀಡುವನಾ ಭಗವಂತ..? Moye Moye ಎಂದ ನೆಟ್ಟಿಗರು

ರಾಹುಲ್ ಗಾಂಧಿ ಅಭಿಮಾನಿ ಇಟ್ಟ ಬೇಡಿಕೆಗೆ ವರ ನೀಡುವನಾ ಭಗವಂತ..? Moye Moye ಎಂದ ನೆಟ್ಟಿಗರು

ಸಾಮಾನ್ಯವಾಗಿ ದೇವರ ಹತ್ತಿರ ಭಕ್ತರು ತಮ್ಮ ಕಷ್ಟ ನಿವಾರಿಸುವಂತೆ ಬೇಡಿಕೆ ಇಡುವುದು ಸಹಜ. ದೇವರ ತೇರು ಎಳೆಯುವ ಸಂದರ್ಭದಲ್ಲಿ ಹಣ್ಣಿನ ಮೇಲೆ ತಮ್ಮ ಆಸೆಗಳನ್ನು ಬರೆದು ಸಮರ್ಪಿಸಿದರೆ ದೇವರ ಆಶಿರ್ವಾಯ ಸಿಗುತ್ತದೆ ಎಂಬ ನಂಬಿಕೆ ಸರ್ವೇಸಾಮಾನ್ಯ.

ಆದರೆ ಇಲ್ಲೊಬ್ಬ ಅಪ್ಪಟ್ಟ ರಾಹುಲ್ ಗಾಂಧಿ ಭಕ್ತ ಇಟ್ಟ ಬೇಡಿಕೇಗೆ ಸ್ವತಃ ದೇವರೇ ಒಂದುಕ್ಷಣ ವಿಚಾರ ಮಾಡುವಂತ ಘಟನೆ ನಡೆದಿದೆ. ಮುಂದಿನ ಪ್ರಧಾನಿಯಾಗಿ ರಾಹುಲ್ ಗಾಂಧಿ ಆಯ್ಕೆಯಾಗಲಿ ಎಂದು ಹರಕೆ ಕಟ್ಟಿಕೊಂಡಿದ್ದು ಸಧ್ಯ ಈ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಭಕ್ತನ ಬೇಡಿಕೆ ಪ್ರಕಾರ ಈ ಬಾರಿ ರಾಹುಲ್ ಗಾಂಧಿ ಪ್ರಧಾನಿ ಆಗಬೇಕಾಗಿದೆ. ಆದರೆ ದೇವರು ವರ ಯಾವಾಗ ಕೊಡುತ್ತಾನೆ ಎಂಬುದನ್ನು ಹೇಳುವುದು ಕಷ್ಟ. ಅದರಂತೆ ಒಂದುವೇಳೆ ಭಗವಂತನ ವರ ಸಿಗಬೇಕಾದರೆ ಮೋದಿ ಸೋಲಬೇಕು ಆದರೆ ಇದು ಕಷ್ಟ.

ಮಾಜಿ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ Rahul gandhi ಸತತ ಚುನಾವಣೆ ಸೋಲಿನಿಂದ ಕಂಗೆಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಧ್ಯ ಕೇರಳದ ವಯನಾಡ ದಿಂದ ಸಂಸದರಾಗಿದ್ದು ಬರುವ ಚುನಾವಣೆಯಲ್ಲಿ ಅಲ್ಲಿಂದಲೇ ಸ್ಪರ್ಧಿಸುವ ಲೆಕ್ಕಾಚಾರ ಹೊಂದಿದ್ದಾರೆ.

ಒಟ್ಟಿನಲ್ಲಿ ಅಭಿಮಾನಿ ಬೇಡಿಕೆಯಂತೆ ರಾಹುಲ್ ಪ್ರಧಾನಿ ಆಗಬೇಕು. ಆದರೆ ನೆಟ್ಟಿಗರು ಮಾತ್ರ ಈ ಪೋಟೋ ನೋಡಿ Moye Moye ಅಂತಿದ್ದಾರೆ. ಎಲ್ಲದಕ್ಕೂ ಕಾಲವೇ ಉತ್ತರ ಹೇಳಬೇಕು ಅಷ್ಟೇ.

Advertisement

Leave a reply

Your email address will not be published. Required fields are marked *

error: Content is protected !!