ಕಾಮದಾಟಕ್ಕೆ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡರು…!
ಬೆಂಗಳೂರು : ರಾಜಕೀಯ ಎಂದರೆ ಹೇಳಿ ಕೇಳಿ ಸಾರ್ವಜನಿಕ ಬದುಕು. ಇಲ್ಲಿ ಎಲ್ಲರೂ ಪ್ರಶ್ನೆ ಮಾಡುವವರೇ. ನಮ್ಮ ವೈಯಕ್ತಿಕ ಬದುಕಿನ ಜೊತೆ ಸಾರ್ವಜನಿಕ ಬದುಕನ್ನು ಶುಚಿಯಾಗಿ ಇಟ್ಟುಕೊಂಡವನಿಗೆ ಜನ ಮರ್ಯಾದೆ ನೀಡುತ್ತಾರೆ. ಇಲ್ಲವಾದರೆ ಎಲ್ಲೆಂದರೆ ಕಚ್ಚೆ ಬಿಚ್ಚಿದರೆ ಮುಗಿಯಿತು ಕಥೆ.
ಹೌದು ರಾಜಕಾರಣದಲ್ಲಿ ಕೆಲ ಬದಲಾವಣೆಗಳು ನಡೆಯುತ್ತಿವೆ. ಏರು ಗತಿಯಲ್ಲಿ ಸಾಗುತ್ತಿದ್ದವನು ವೇಗವಾಗಿ ನೆಲಕ್ಕೆ ಅಪ್ಪಳಿಸುತ್ತಾನೆ. ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಅನುಭವಿಸುತ್ತಾನೆ. ಕಷ್ಟ ಪಟ್ಟು ಕಟ್ಟಿಕೊಂಡ ಸುಂದರ ಬದುಕನ್ನು ಕ್ಷಣದ ಸುಖಕ್ಕೆ ಹಾಳು ಮಾಡಿಕೊಳ್ಳುವವರು ಅನೇಕರು. ಈ ಪಟ್ಟಿಯಲ್ಲಿ ಆಗಾಗ್ಗೆ ಕೆಲವರು ಸೇರುತ್ತಾರೆ.
ಪ್ರಸ್ತುತ ಕೆಲವರ ರಾಜಕೀಯ ಭವಿಷ್ಯ ಹಾಳಾಗಿದ್ದು ಇದೇ ಕಾರಣಕ್ಕೆ. ಮಾಡಬಾರದ ತಪ್ಪು ಮಾಡಿ ದೆಹಲಿ ಹೆಡ್ ಮಾಸ್ಟರ್ ಕಡೆಯಿಂದ ಏಟು ತಿಂದು ಮನೆಗೆ ಮರಳುವಂತಾಗಿದೆ. ಹೆಡ್ ಮಾಸ್ಟರ್ ಕೊನೆಯ ಪಕ್ಷ ಭ್ರಷ್ಟಾಚಾರ ಸಹಿಸಬಹುದು ಆದರೆ ವ್ಯಭಿಚಾರ ಯಾವತ್ತೂ ಒಪ್ಪುವವರಲ್ಲ.
ರಾಜಕೀಯ ಏರು ಗತಿಯಲ್ಲಿದ್ದ ಕೆಲವರು ಏಕಾಏಕಿ ಪಕ್ಕಕ್ಕೆ ಸರಿಯುವ ಮೂಲಕ ಅದೊಂದು ತಪ್ಪಿನಿಂದ ಭವಿಷ್ಯದ ಮೇಲೆ ಕಲ್ಲು ಚೆಲ್ಲಿಕೊಂಡವರು ಇವರು. ಇದರಲ್ಲಿ ಒಬ್ಬರಂತು ಎಪಿಸೋಡ್ ಲೆಕ್ಕದಲ್ಲಿ ಅನಾಚಾರ ಮಾಡಿದವರು. ಆದರೆ ತಡೆಯಾಜ್ಞೆ ಎಂಬ ಕವಚ ತೊಟ್ಟು ಸುತ್ತಾಡುವವರೇ.
ಈಗೆಲ್ಲಾ ಆಗುತ್ತಿರುವ ಮಹತ್ವದ ಬೆಳವಣಿಗೆ ಹಿಂದೆ ನಡೆದ ಘಟನೆಗಳು ವರ್ಷದ ಹಿಂದಿನವು. ಕೆಲವರು ಮೂರು ಬಿಟ್ಟು ವರ್ತಿಸಿದ್ದು, ನಮ್ಮನ್ನು ಯಾರು ಪ್ರಶ್ನೆ ಮಾಡುತ್ತಾರೆ ಎಂಬ ಉಡಾಫೆ ಈ ಮಟ್ಟಿಗೆ ಅವರನ್ನು ತಂದು ನಿಲ್ಲಿಸಿದೆ ಎನ್ನುತ್ತದೆ ಸಮಾಜ.

