Select Page

Advertisement

ಈ ಬಾರಿ ಮಹಿಳೆಯೊಬ್ಬರು ಪ್ರಧಾನಿ ಆಗಲಿದ್ದಾರೆ ; ಸ್ವಾಮೀಜಿ ಸ್ಪೋಟಕ ಭವಿಷ್ಯ

ಈ ಬಾರಿ ಮಹಿಳೆಯೊಬ್ಬರು ಪ್ರಧಾನಿ ಆಗಲಿದ್ದಾರೆ ; ಸ್ವಾಮೀಜಿ ಸ್ಪೋಟಕ ಭವಿಷ್ಯ

ತುಮಕೂರು : ಲೋಕಸಭಾ ಚುನಾವಣೆಗೆ ಈಗಾಗಲೇ ಪಕ್ಷಗಳು ಸೆಣೆಸಾಟ ನಡೆಸುತ್ತಿವೆ. ಪ್ರಚಾರ, ಟಿಕೆಟ್ ಹಂಚಿಕೆ, ಗೆಲುವಿನ ಲೆಕ್ಕಾಚಾರಗಳು ಶುರುವಾಗಿವೆ. ಈ ಬಾರಿ ಚುನಾವಣೆ ಗೆದ್ದು ಹ್ಯಾಟ್ರಿಕ್ ಬಾರಿಸುವ ಖುಷಿಯಲ್ಲಿ ಪ್ರಧಾನಿ ಮೋದಿ ಇದ್ದರೆ, ಶತಾಯಗತಾಯ ಬಿಜೆಪಿ ಸೋಲಿಸಿ ಪ್ರಧಾನಿ ಹುದ್ದೆ ಅಲಂಕರಿಸುವ ಕನಸ್ಸನ್ನು ಕಾಂಗ್ರೆಸ್ ಕಾಣುತ್ತಿದೆ.

ಇದೆಲ್ಲದರ ನಡುವೆ ನೊಣವಿನಕೆರೆ ಸ್ವಾಮೀಜಿ ಅವರು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಪ್ರಧಾನಿ ಯಾರಾಗ್ತಾರೆ ಎಂಬುದನ್ನು ಹೇಳಿದ್ದಾರೆ. ಈ ಬಾರಿಯ ಪ್ರಧಾನಿ ಒಬ್ಬ ಮಹಿಳೆಯಾಗುತ್ತಾರೆ ಎಂಬುದಾಗಿ ತುಮಕೂರಿನ ನೊಣವಿನಕೆರೆ ಯಶ್ವಂತ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಹುದ್ದೆಗೆ ಏರಲ್ಲ ಎಂದಿದ್ದಾರೆ. ಈ ಮೂಲಕ ಈ ಬಾರಿ ಮಹಿಳೆಯೇ ಪ್ರಧಾನಿಯಾಗುವುದು ಎಂದು ಭವಿಷ್ಯ ನುಡಿದಿದ್ದಾರೆ.

ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮಹಿಳಾ ಪ್ರಧಾನಿಯಾಗಿ ಪ್ರಿಯಾಂಕಾ ಗಾಂಧಿ ದೇಶದ ಗದ್ದುಗೆ ಏರಲಿದ್ದಾರೆ. ಒಬ್ಬ ಸ್ತ್ರಿ ಪುರುಷನ ಎದುರು ದುರ್ಗಿಯಾಗಿ ನಿಂತು, ಪುರುಷನಿಗೆ ಭಯ ಹುಟ್ಟಿಸಿ, ತಾನೇ ಅಧಿಕಾರವನ್ನು ಮಾಡುತ್ತಾಳೆ. ತಾವು ಗೆದ್ದ ನಂತರ ತಾಯಿ‌ಮಮತೆಯಿಂದ ಆ ಅಧಿಕಾರವನ್ನು ಪರರಿಗೆ ಬಿಟ್ಟುಕೊಡುತ್ತಾಳೆ ಎಂದು ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ, 135 ಕ್ಷೇತ್ರಗಳನ್ನು ಗೆಲ್ಲುತ್ತದೆ ಎಂದು ನಿಖರವಾಗಿ ಭವಿಷ್ಯ ನುಡಿದಿದ್ದರು. ಅದು ಸತ್ಯ ಕೂಡ ಆಗಿತ್ತು. ಅದಷ್ಟೇ ಅಲ್ಲ ತೆಲಂಹಾಣದ ರಾಜಕೀಯ ಭವಿಷ್ಯ ಸೇರಿದಂತೆ ನೊಣವಿನಕೆರೆ ಸ್ವಾಮೀಜಿ ನುಡಿದಿದ್ದ ಭವಿಷ್ಯ ನಿಜವಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!