ಬೆಳಗಾವಿ : ಬೆಳಗಾವಿ ಜಿಲ್ಲಾ ಪಂಚಾಯತಿ ನೂತನ ಸಿಇಒ‌ ಆಗಿ ರಾಹುಲ್ ಸಿಂಧೆ ಅವರನ್ನು ನೇಮಕ‌ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ‌ ಹಿಂದಿನ ಸಿಇಒ ಹರ್ಷಲ್ ಬೋಯರ್ ಅವರನ್ನು‌ ಬೆಂಗಳೂರಿನ ಅಟಲ್ ಜನಸ್ನೇಹಿ‌ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ತೆರವಾದ ಸ್ಥಾನಕ್ಕೆ ವಿಜಯಪುರ ಜಿಲ್ಲಾ ಪಂಚಾಯತಿ ಸಿಇಒ‌ ಆಗಿದ್ದ ರಾಹುಲ್ ಸಿಂಧೆ ಅವರನ್ನು ನೇಮಕ‌ ಮಾಡಲಾಗಿದೆ.