ಮಹಿಳೆಯ ಮೂಗು ಕತ್ತರಿಸಿದ್ದ ಆರೋಪಿ ಬಂಧನ
ಬೆಳಗಾವಿ : ಮಕ್ಕಳು ಹೂ ಕಿತ್ತ ಕಾರಣಕ್ಕೆ ಮಹಿಳೆ ಮೂಗು ಕತ್ತರಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಂಗನವಾಡಿ ಮಕ್ಕಳು ಪಕ್ಕದ ಮನೆಯವರ ಆವರಣದಲ್ಲಿನ ಹೂ ಕಿತ್ತ ಕಾರಣಕ್ಕೆ ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿದ ಘಟನೆ ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ನಡೆದಿತ್ತು. ಕಲ್ಯಾಣಿ ಮೋರೆ ( 44 ) ಆರೋಪಿಯನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ.
ವರ್ಷದ ಮೊದಲ ದಿನ ಜ. 1 ರಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಸುರ್ತೆ ಗ್ರಾಮದ ಅಂಗನವಾಡಿ ಮಕ್ಕಳು ಆಟವಾಡುತ್ತಾ ಪಕ್ಕದ ಮನೆಯ ಆವರಣದಲ್ಲಿನ ಹೂ ಕಿತ್ತಿದ್ದರು. ಇಷ್ಟಕ್ಕೆ ಕುಪಿತಗೊಂಡ ಆರೋಪಿ ಕಲ್ಯಾಣಿ ಮೋರೆ ಎಂಬಾತ ಅಂಗನವಾಡಿ ಸಹಾಯಕಿ ಮೀರಾ ಮೋರೆ(50) ಯ ಮೂಗನ್ನು ಕುಡಗೋಲಿನಿಂದ ಕತ್ತರಿಸಿದ್ದ
ಶ್ವಾಸಕೋಶದಲ್ಲಿ ರಕ್ತ ಹೋಗಿರುವ ಪರಿಣಾಮ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ಸ್ಥಿತಿಯಲ್ಲಿ ನರಳಾಡುತ್ತಿದ್ದಾಳೆ. ಆರೋಪಿ ಬಂಧನದ ಕುರಿತು ನಗರ ಅಪರಾಧ ವಿಭಾಗದ ಡಿಸಿಪಿ ಸ್ನೇಹ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

