ಬೆಂಗಳೂರು : ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ
ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವ ಮಧು ಬಂಗಾರಪ್ಪ
ಸಂಕಷ್ಷದ ಸುಳಿಗೆ ಸಿಲುಕಿದ್ದಾರೆ. ಸಂಸ್ಥೆ ಒಂದಕ್ಕೆ ನೀಡಿದ್ದ ಚಕ್ ಬೌನ್ಸ್ ಆಗಿದ್ದು ದೊಡ್ಡ ಮೊತ್ತದ ದಂಡ ಪಾವತಿಗೆ ಕೋರ್ಟ್ ಆದೇಶಿಸಿದೆ.

ರಾಜೇಶ್‌ ಎಕ್ಸ್‌ಪೋರ್ಟ್‌ ಸಂಸ್ಥೆಗೆ ಆಕಾಶ್‌ ಆಡಿಯೋ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಧು ಬಂಗಾರಪ್ಪ 6.60 ಕೋಟಿ ಚಮೊತ್ತದ ಚೆಕ್‌ ನೀಡಿದ್ದರು. ಆದರೆ ಈ ಚೆಕ್‌ 2011ರಲ್ಲಿ ಬೌನ್ಸ್‌ ಆಗಿತ್ತು , ಈ ಹಿನ್ನೆಲೆ ರಾಜೇಶ್‌ ಎಕ್ಸ್‌ಪೋರ್ಟ್‌ ಸಂಸ್ಥೆ ಮಧು ಬಂಗಾರಪ್ಪ ವಿರುದ್ಧ 6.60 ಕೋಟಿ ಚೆಕ್‌ ಬೌನ್ಸ್‌ ಕೇಸ್‌ ದಾಖಲಿಸಿತ್ತು‌.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೆ ಮಧು ಬಂಗಾರಪ್ಪ ಜಾಮೀನು ಪಡೆದುಕೊಂಡಿದ್ದರು ಕೂಡ ಆದರೆ ಈಗ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಭಾರಿ ದಂಡ ವಿಧಿಸಿ ಆದೇಶ ನೀಡಿದೆ. 6 ಕೋಟಿ 96 ಲಕ್ಷದ 70 ಸಾವಿರ ರೂಪಾಯಿ ದಂಡ ಪಾವತಿಯ ಶಿಕ್ಷೆಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ನೀಡಿದೆ.

ದಂಡದ ಮೊತ್ತದಲ್ಲಿ  9,96,60೦೦೦ ರೂ. ಹಣವನ್ನು ದೂರುದಾರರಿಗೆ ನೀಡಬೇಕು. ಹಾಗೆಯೇ 10 ಸಾವಿರ ರೂ. ಹಣವನ್ನು ಸರ್ಕಾರಕ್ಕೆ ದಂಡವಾಗಿ ನೀಡಲು ಕೋರ್ಟ್‌ ಸೂಚಿಸಿದೆ.