Video – ನಾವು ಲೂಟಿಕೋರರು, ನಮಗೆ ಮರ್ಯಾದೆ ಕೊಡಬೇಡಿ – ಕಾಂಗ್ರೆಸ್ ಶಾಸಕ ರಾಜು ಕಾಗೆ
ಕಾಗವಾಡ : ಜಗತ್ತಿನಲ್ಲಿ ಕಳ್ಳರು, ಲೂಟಿಕೋರರು, ದರೋಡೆ ಮಾಡುವವರು ಇದ್ದರೆ ಅದು ರಾಜಕಾರಣಿಗಳು, ನಮಗೆ ರಾಜ ಮರ್ಯಾದೆ ಕೊಡಬೇಡಿ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಮುಗಳಖೋಡ ಗ್ರಾಮದಲ್ಲಿ ನಡೆದ ಖಾಸಗಿ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದ ಇವರು. ಅದೆಷ್ಟೋ ಯೋಜನೆಗಳು ಕಮಿಷನ್ ಹೊಡೆಯಲು ಪ್ರಾರಂಭಿಸಲಾಗಿದೆ. ರಾಜಕಾರಣಿಗಳು ಒಳ್ಳೆಯವರಲ್ಲ. ದಯವಿಟ್ಟು ಸಮಾಜ ಮಠಾಧೀಶರಿಗೆ ನೀಡುವ ಗೌರವ ರಾಜಕಾರಣಿಗಳಿಗೆ ಕೊಡಬೇಡಿ ಎಂದರು.
ಕೆಲ ದಿನಗಳ ಹಿಂದೆ ಆಸ್ಪತ್ರೆಯಲ್ಲಿ ನರ್ಸ್ ನನಗೆ ಅಜ್ಜ ಎಂದು ಹೇಳಿದ್ದು ತುಂಬಾ ನೋವಾಗಿತ್ತು ಎಂಬ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಶಾಸಕ ಕಾಗೆ ಸಧ್ಯ ರಾಜಕಾರಣವನ್ನೇ ಟೀಕಿಸಿ ಸುದ್ದಿಯಾಗಿದ್ದಾರೆ.


