Select Page

Advertisement

ಬೆಳಗಾವಿ – ಹಿಂಗೂ ಸಾಗಿಸ್ತಾರಾ ಅಕ್ರಮ ಸಾರಾಯಿ ; ಏನ್ ತಲೆ ಗುರು..!

ಬೆಳಗಾವಿ – ಹಿಂಗೂ ಸಾಗಿಸ್ತಾರಾ ಅಕ್ರಮ ಸಾರಾಯಿ ; ಏನ್ ತಲೆ ಗುರು..!

ಬೆಳಗಾವಿ : ಗೋವಾದ ಮದ್ಯ ಮಾರಾಟ ಮಾಡಲು ಎಂದು ಯಾರಿಗೆ ಕಾಣದಂತೆ ಮಶ್ರೂಮ್ ಸೀಡ್ಸ್ ಚೀಲದ ನಡುವೆ ಅಕ್ರಮವಾಗಿ ನಕಲಿ ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕಾಕತಿಯ ದಾಬಾವೊಂದರಲ್ಲಿ ಬಳಿ ವಶಕ್ಕೆ ಪಡೆದಿರುವ ಬೆಳಗಾವಿ ಅಬಕಾರಿ ಪೊಲೀಸರು ಲಾರಿ ಸೇರಿದಂತೆ ಒಟ್ಟು 67 ಲಕ್ಷ ರೂ. ಮೌಲ್ಯದ ಸ್ವತ್ತು ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಗೋವಾಕ್ಕೆ ಮದ್ಯ ಮಾರಾಟಕ್ಕೆಂದು 900 ಬಾಕ್ಸ್ಗಳಲ್ಲಿ ನಕಲಿ ಮದ್ಯ ಹಾಗೂ 300 ಬಾಕ್ಸ್ಗಳಲ್ಲಿ ಬೀಯರ್ ಒಟ್ಟು 7,776 ಲೀಟರ್ ಗೋವಾ ಮದ್ಯ ಮತ್ತು 3,600 ಲೀಟರ್ ಗೋವಾ ಬೀಯರ್‌ನ್ನು ಅಕ್ರಮವಾಗಿ ಸಾಗಾಟ ಮಾಡುವಾಗ ಖಚಿತ ಮಾಹಿತಿಯ ಆಧಾರದ ಮೇಲೆ ಅಬಕಾರಿ ಪೊಲೀಸರು.

ಕೆ.ಎ.22 ಡಿ 3189 ನೋಂದಣಿಯ ಕೆಂಪು ಬಣ್ಣದ 16 ಚಕ್ರದ ಟಾಟಾ ಕಂಪನಿಯ ಲಾರಿ ಮತ್ತು ಸವದತ್ತಿ ತಾಲೂಕಿನ ಕಡಬಿ ಶಿವಾಪೂರ ಗ್ರಾಮದ ಚಾಲಕ ಆದಮ್ ಕುತುಬುದ್ಧಿನ್ ಮುಗಟಖಾನ್ (28), ಬಾಗಲಕೋಟ ಜಿಲ್ಲೆಯ ಹೊನ್ನಾಕಟ್ಟಿ ಗ್ರಾಮದ ಆಸೀಫ್ ರೆಹಮಾನಸಾಬ ಯಲಿಗಾರ (23) ಆರೋಪಿಗಳನ್ನು ಬಂಧಿಸಿದ್ದಾರೆ.

ಕಳೆದ ಬಾರಿಯೇ ಈ ಲಾರಿಯನ್ನು ಹೊಂಚು ಹಾಕಿ ಕುಳಿತಿದ್ದ ಅಬಕಾರಿ ಪೊಲೀಸರು ಈ ಹಿಂದೆ ತಪ್ಪಿಸಿಕೊಂಡಿತ್ತು. ಆದರೆ ಖಚಿತ ಮಾಹಿತಿಯ ಆಧಾರದ ಮೇಲೆ ಗೋವಾಕ್ಕೆ ಮಾರಾಟ ಮಾಡಲಾಗುತ್ತಿದ್ದ ನಕಲಿ ಮದ್ಯವನ್ನು ಸಾಗಾಟ ಮಾಡುತ್ತಿದ್ದರು‌.

ಅಬಕಾರಿ ಅಪರ ಆಯುಕ್ತ ಡಾ.ವೈ ಮಂಜುನಾಥ್, ಅಬಕಾರಿ ಜಂಟಿ ಆಯುಕ್ತರಾದ ಫಿರೋಜಖಾನ್ ಕಿಲ್ಲೇದಾರ, ವನಜಾಕ್ಷಿ ಎಂ, ವಿಜಯಕುಮಾರ ಹಿರೇಮಠ ಮಾರ್ಗದರ್ಶನದಲ್ಲಿ ರವಿ ಮುರುಗೋಡ, ಮಂಜುನಾಥ ಗಲಗಲ್ಲಿ, ಸುನೀಲ ಪಾಟೀಲ, ಮಹಾದೇವಪ್ಪ ಕಟಗೆನ್ನವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶ್ವಿಯಾಗಿದ್ದಾರೆ.

ಇತ್ತೀಚೆಗೆ ಅಬಕಾರಿ ಇಲಾಖೆಯ ಸಿಬ್ಬಂದಿಗಳು ನಾಶಪಡಿಸಿದ ಮದ್ಯ ಹಿಂದಿನದ್ದು, ಕಳೆದ ಮೂರು ಬಾರಿ ದಾಳಿ ಮಾಡಲಾದ ಮದ್ಯದ ಕುರಿತು ತನಿಖೆ ನಡೆಯುತ್ತಿದೆ. ಸದ್ಯ ಗೋವಾಕ್ಕೆಂದು ಮಾರಾಟ ಮಾಡಲು ಎಂದು ಹೇಳಿ ಸಾಗಾಟ ಮಾಡಲಾಗುತ್ತಿದ್ದ ನಕಲಿ ಮದ್ಯವನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

-ಡಾ. ವೈ.ಮಂಜುನಾಥ್, ಅಪರ ಆಯುಕ್ತ, ಬೆಳಗಾವಿ ಅಬಕಾರಿ

Advertisement

Leave a reply

Your email address will not be published. Required fields are marked *

error: Content is protected !!