Select Page

Advertisement

ಸದನದಲ್ಲಿ ಮರಾಠಿ ಭಾಷೆಗೆ ಸವದಿ ವಿರೋಧ ; ಮಾತಿನಲ್ಲೇ ಚಾಟಿ ಬೀಸಿದ ಖಾನಾಪುರ ಶಾಸಕ

ಸದನದಲ್ಲಿ ಮರಾಠಿ ಭಾಷೆಗೆ ಸವದಿ ವಿರೋಧ ; ಮಾತಿನಲ್ಲೇ ಚಾಟಿ ಬೀಸಿದ ಖಾನಾಪುರ ಶಾಸಕ

ಬೆಳಗಾವಿ : ಬೆಳಗಾವಿ ಚಳಿಗಾಲ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಬಿಜೆಪಿ ಸದಸ್ಯ ವಿಠ್ಠಲ ಹಲಗೇಕರ್ ಮರಾಠಿ ಭಾಷೆಯಲ್ಲಿ ಮಾತನಾಡಿದ್ದಕ್ಕೆ ಶಾಸಕ ಲಕ್ಷ್ಮಣ ಸವದಿ ವಿರೋಧ ವ್ಯಕ್ತಪಡಿಸಿದ ಘಟನೆ ಜರುಗಿತು.

ಖಾನಾಪುರ ಕ್ಷೇತ್ರದ ಸಮಸ್ಯೆ ಕುರಿತು ಸದನದಲ್ಲಿ ಮಾತನಾಡಲು ಮುಂದಾದ ಶಾಸಕ ವಿಠ್ಠಲ ಹಲಗೇಕರ್, ನನಗೆ ಕನ್ನಡ ಸ್ಪಷ್ಟವಾಗಿ ಬರುವುದಿಲ್ಲ, ಮರಾಠಿಯಲ್ಲಿ ಮಾತನಾಡುವೆ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಹಲಗೇಕರ್ ಮಾತನಾಡುತ್ತಿದ್ದಂತೆ ಶಾಸಕ ಲಕ್ಷ್ಮಣ ಸವದಿ ವಿರೋಧ ವ್ಯಕ್ತಪಡಿಸಿದರು .

ಅವನಿಗೆ ಕನ್ನಡ ಮಾತನಾಡಲು ಬರುತ್ತದೆ ಸದನದಲ್ಲಿ ಕನ್ನಡ ಮಾತನಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸ್ಪೀಕರ್ ಖಾದರ್ ಮರಾಠಿಯಲ್ಲಿ ಮಾತನಾಡಬಹುದು ಎಂದು ಹಲಗೇಕರ್ ಗೆ ತಿಳಿಸದರು. ಈ ಸಂದರ್ಭದಲ್ಲಿ ಗಲಿಬಿಲಿಗೆ ಒಳಗಾದ ಶಾಸಕ ಹಲಗೇಕರ್ ಅಲ್ಪಸ್ವಲ್ಪ ಕನ್ನಡದಲ್ಲಿ ಮಾತನಾಡಿ ಖಾನಾಪುರ ಅಭಿವೃದ್ಧಿ ವಿಚಾರವಾಗಿ ಸಿಎಂ ಗಮನಸೆಳೆದರು.

ಕನ್ನಡ ಉಳಿಸಿ ಆದರೆ ಬೇರೆ ಭಾಷಿ ತೆಗಳಬೇಡಿ – ಸವದಿಗೆ ಸ್ಪೀಕರ್ ಕ್ಲಾಸ್ – ಕನ್ನಡ ಭಾಷೆ ಉಳಿಸಿಸಬೇಕು ಹಾಗಂತ ಬೇರೆ ಭಾಷೆ ವಿರೋಧ ಮಾಡುವುದು ಸರಿಯಲ್ಲ‌. ನೀವು ಹಿರಿಯ ಶಾಸಕರಿದ್ದೀರಿ, ಈ ವಿಚಾರವಾಗಿ ಮಾತನಾಡುವುದು ಸರಿಯಲ್ಲ ಎಂದು ಸವದಿಗೆ ಕ್ಲಾಸ್ ತಗೆದುಕೊಂಡರು. ಹಾಗೆಯೆ ಮುಂದಿನ ಅಧಿವೇಶನದ ಸಂದರ್ಭದಲ್ಲಿ ಉತ್ತಮವಾಗಿ ಕನ್ನಡ ಭಾಷೆಯಲ್ಲಿ ಮಾತನಾಡುವಂತೆ ಶಾಸಕ ವಿಠ್ಠಲ ಹಲಗೇಕರ್ ಅವರಿಗೆ ಸ್ಪೀಕರ್ ಕಿವಿಮಾತು ಹೇಳಿದರು.

ಖಾನಾಪುರಕ್ಕೆ ಬಂದಾಗ ಮರಾಠಿ ಮಾತನಾಡುತ್ತೀರಿ – ಸವದಿಗೆ ಶಾಸಕ ಹಲಗೇಕರ್ ಟಾಂಗ್ : ಸದನದಲ್ಲಿ ಮರಾಠಿ ಭಾಷೆ ಮಾತನಾಡಲು ವಿರೋಧ ಮಾಡಿದ ಇದೇ ಲಕ್ಷ್ಮಣ ಸವದಿ ಖಾನಾಪುರಕ್ಕೆ ಬಂದಾಗ ಮರಾಠಿ ಭಾಷೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಶಾಸಕರು ಮೇಜು ತಟ್ಟಿ ಶಾಸಕ ಹಲಗೇಕರ್  ಬೆನ್ನಿಗೆ ನಿಂತರು. ಈ ಸಂದರ್ಭದಲ್ಲಿ ಶಾಸಕರಾದ ಶರಣು ಸಲಗಾರ, ಭರತ್ ಶೆಟ್ಟಿ, ಹರೀಶ್ ಪೂಂಜಾ ಹಾಗೂ ನಿಖಿನ್ ಕತ್ತಿ ವಿಠ್ಠಲ ಹಲಗೇಕರ ಅವರ ಕೈ ಕುಲುಕಿ ಆತ್ಮಸ್ಥೈರ್ಯ ತುಂಬಿದ್ದು ವಿಶೇಷವಾಗಿತ್ತು.

Advertisement

Leave a reply

Your email address will not be published. Required fields are marked *

error: Content is protected !!