Select Page

Advertisement

ವಿಪಕ್ಷ ನಾಯಕನಾಗಿ ಆರ್. ಅಶೋಕ್ ಆಯ್ಕೆ ; ಕೊನೆಗೂ ರಾಜಾಹುಲಿಗೆ ಜೈ ಎಂದ ಬಿಜೆಪಿ ಹೈಕಮಾಂಡ್

ವಿಪಕ್ಷ ನಾಯಕನಾಗಿ ಆರ್. ಅಶೋಕ್ ಆಯ್ಕೆ ; ಕೊನೆಗೂ ರಾಜಾಹುಲಿಗೆ ಜೈ ಎಂದ ಬಿಜೆಪಿ ಹೈಕಮಾಂಡ್

ಬೆಂಗಳೂರು : ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ವಿರೋಧ ಪಕ್ಷದ ನಾಯಕರಾಗಿ ಆರ್ ಅಶೋಕ್ ಆಯ್ಕೆ ಮಾಡಿ ಕೇಂದ್ರ ನಾಯಕರು ಘೋಷಣೆ ಮಾಡಿದ್ದಾರೆ.

ಬಿಜೆಪಿ ಕೇಂದ್ರ ವೀಕ್ಷಕರ ತಂಡ  ಬೆಂಗಳೂರಿಗೆ ಬಂದು ಸಭೆ ನಡೆಸಿತ್ತು. ಹಾಗೆಯೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಶಾಸಕರ ಮಾಹಿತಿ ಪಡೆದು  ವಿಪಕ್ಷ ನಾಯಕನಾಗಿ ಆರ್ ಅಶೋಕ್ ಅವರನ್ನು ಆಯ್ಕೆ ಮಾಡಿದ್ದಾರೆ.

ಸಧ್ಯ ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಬಿಜೆಪಿಯಲ್ಲಿ ಗೊಂದಲ ಸೃಷ್ಡಿಯಾಗಿದ್ದು, ಆರ್ ಅಶೋಕ್ ಆಯ್ಕೆಯನ್ನು ಯತ್ನಾಳ್ ಸೇರಿದಂತೆ ಕೆಲವರು ವಿರೋಧಿಸಿದ್ದಾರೆ. ಇನ್ನೂ ಅನೌಪಚಾರಿಕ ಸಭೆಯಲ್ಲಿ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಹೇಳಲಾಗುತ್ತದೆ.

ಉತ್ತರ ಕರ್ನಾಟಕ ಭಾಗದ ಒಬ್ಬರಿಗೆ ವಿಪಕ್ಷ ನಾಯಕನ ಸ್ಥಾನ ನೀಡುವ ಕುರಿತು ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಇಬ್ಬರು ನಾಯಕರು ಪಟ್ಟು ಹಿಡಿದಿದ್ದರು. ಆದರೆ ಆರ್. ಅಶೋಕ್ ಅವರನ್ನು ಆಯ್ಕೆ ಮಾಡಿ ಪಕ್ಷ ನಿರ್ಧಾರ ಪ್ರಕಟಿಸಿದೆ.

Advertisement

Leave a reply

Your email address will not be published. Required fields are marked *

error: Content is protected !!