Select Page

Advertisement

ಪ್ರೀತಿ ಒಪ್ಪದ ಯುವತಿ ಪೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಹರಿಬಿಟ್ಟ್ ಕಿರಾತಕ ಅಂದರ್

ಪ್ರೀತಿ ಒಪ್ಪದ ಯುವತಿ ಪೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಹರಿಬಿಟ್ಟ್ ಕಿರಾತಕ ಅಂದರ್

ಬೆಳಗಾವಿ : ಸದ್ಯ ದೇಶಾಧ್ಯಂತ ಸಂಚಲನ ಮೂಡಿಸಿದ್ದ ಡೀಪ್ ಫೇಕ್ ಪ್ರಕರಣ ಈಗ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.‌  ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿ ಹಾಗೂ ಆಕೆಯ ಇಬ್ಬರು ಸ್ನೇಹಿತೆಯರ ನಗ್ನ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಯುವಕನನ್ನು ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಖಾನಾಪುರದ ಮಂಥನ್ ಪಾಟೀಲ ಎಂಬ ಯುವಕ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಪ್ರೀತಿಗೆ ಸ್ಪಂದಿಸದ ಕಾರಣ ನಿನ್ನ ಮತ್ತು ಸ್ನೇಹಿತೆಯರ ಮಾನ ಹರಾಜು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದ. ಬಳಿಕ ಸಾಮಾಜಿ ಜಾಲತಾಣದಲ್ಲಿ ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು, ಡೀಫ್ ಫೇಕ್ ಫೋಟೋ ಎಡಿಟ್ ಮಾಡಿ ಮೂವರು ಯುವತಿಯರ ಅಶ್ಲೀಲ ಭಂಗಿಯ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ಆರೋಪಿತ ಯುವಕ ಮಂಥನ್ ಪಾಟೀಲ್ ವಿರುದ್ಧ  ನೊಂದ ಯುವತಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು.‌ ತಕ್ಷಣವೇ ಎಚ್ಚೆತ್ತುಕೊಂಡ ಖಾನಾಪುರ ಪೊಲೀಸರು ಆರೋಪಿ ಮಂಥನ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿದ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್.  ಯುವತಿಯ ನಿಜವಾದ ಹೆಸರಿನ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಫೋಟೋ ತೆಗೆದುಕೊಂಡು ಈ ರೀತಿ ಡೀಫ್ ಫೇಕ್ ಫೋಟೋ ತಂತ್ರಜ್ಞಾನದಿಂದ ಆರೋಪಿ ಎಡಿಟ್ ಮಾಡಿದ್ದ. ನಗ್ನ ಫೋಟೋವನ್ನು ಆ ಯುವತಿಯ ಹೆಸರಿನ ನಕಲಿ ಖಾತೆ ತೆರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. 

ಅದೃಷ್ಟವಶಾತ್ ಯುವತಿ ತನಗಾದ ಅನ್ಯಾಯಕ್ಕೆ ಮುಂದೆ ಬಂದು ದೂರು ಕೊಟ್ಟಿದ್ದರಿಂದ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸೈಬರ್ ಕ್ರೈಮ್ ನಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ವಿವರಿಸಿದರು.

ಸಾಮಾನ್ಯ ಪೋಟೋ ಎಡಿಟ್ ಬಳಸಿ ಮತ್ತೊಬ್ಬರ ಮಾನಹಾನಿ ಮಾಡುವ ಕೆಲಸ ನಡೆದಿರುತ್ತವೆ.‌ಈ ರೀತಿ ಯಾರಿಗಾದ್ರೂ ಅನ್ಯಾಯ ಆಗಿದ್ದರೆ ಹಿಂಜರಿಯದೇ, ಅಂಜದೇ, ಅಳುಕದೇ ನಮ್ಮ ಪೊಲೀಸರ ಬಳಿ ಬಂದು ದೂರು ಕೊಡಿ. ನಾವು ಅರೋಪಿಗಳ ವಿರುದ್ಧ ನಿಶ್ಚಿತವಾಗಿ ಕ್ರಮ ಕೈಗೊಳ್ಳುತ್ತೇವೆ. ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಡಾ.ಭೀಮಾಶಂಕರ ಗುಳೇದ ಭರವಸೆ ನೀಡಿದರು.

********
ಯುವತಿ ಧೈರ್ಯಕ್ಕೆ ಎಸ್ಪಿ ಮೆಚ್ಚುಗೆ : ಮಾನಹಾನಿ ಅಂತಹ  ಪ್ರಕರಣಗಳು ಸಂಭವಿಸಿದಾಗ ಅದೇಷ್ಟೋ ಯುವತಿಯರು ಆತ್ಮಹತ್ಯೆ ದಾರಿ ತುಳಿಯುತ್ತಾರೆ.  ಆದರೆ ಈ ಯುವತಿ ತನಗಾದ ಅನ್ಯಾಯಕ್ಕೆ ಧೈರ್ಯದಿಂದ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಹಾಗಾಗಿ, ಪ್ರಕರಣ ಬೆಳಕಿಗೆ ಬಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಯುವತಿ ಧೈರ್ಯಕ್ಕೆ ಡಾ.ಭೀಮಾಶಂಕರ ಗುಳೇದ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Leave a reply

Your email address will not be published. Required fields are marked *

error: Content is protected !!