Select Page

Advertisement

ಬೆಳಗಾವಿ : ವಿವಾಹಿತ ಮಹಿಳೆ ಭೀಕರ ಹತ್ಯೆ, ಆರೋಪಿ ಬಂಧನ 

ಬೆಳಗಾವಿ : ವಿವಾಹಿತ ಮಹಿಳೆ ಭೀಕರ ಹತ್ಯೆ, ಆರೋಪಿ ಬಂಧನ 

ಮೂಡಲಗಿ : ವಿವಾಹಿತ ಮಹಿಳೆಯೋರ್ವಳ ಕೊಲೆಯಾದ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ  ಕಳ್ಳಿಗುದ್ದಿ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ವಿವಾಹಿತ ಮಹಿಳೆಯನ್ನು ಲಕ್ಕವ್ವ ಯಮನಪ್ಪ ತೋಳಿನ (30) ಎಂದು ತಿಳಿದು ಬಂದಿದ್ದು, ಆರೋಪಿತನನ್ನು ಕಳ್ಳಿಗುದ್ದಿ ಗ್ರಾಮದ ವಿಠ್ಠಲ ಕರೆಪ್ಪ ಬಿಲಕುಂದಿ (23) ಎಂದು ಹೇಳಲಾಗುತ್ತಿದೆ.

ಮೃತ ಮಹಿಳೆ ಮೂಲತಃ ಈಗೀನ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದವರೆಂದು ತಿಳಿದು ಬಂದಿದೆ. ಕಳೆದ 8 ವರ್ಷಗಳ ಹಿಂದೆ ಪತಿಯೊಂದಿಗೆ ಕಳ್ಳಿಗುದ್ದಿ ಗ್ರಾಮಕ್ಕೆ ಆಗಮಿಸಿ ಇಲ್ಲಿಯೇ ಒಬ್ಬರ ಹೊಲವನ್ನು ಪಾಲದಲ್ಲಿ ಮಾಡಿಕೊಂಡು ವಾಸಿಸುತ್ತಿದ್ದರು.

ಪಾಲದಲ್ಲಿ ಮಾಡಿದ ಹೊಲದ ಪಕ್ಕದಲ್ಲಿಯೇ ಆರೋಪಿತನ ಹೊಲ-ಮನೆ ಇರುವುದರಿಂದ ದಂಪತಿಗಳ ಪರಿಚಯವಾಗಿದೆ. ಖಾಸಗಿ ವಿಷಯವೊಂದಕ್ಕೆ ಸಂಬಂಧಿಸಿದಂತೆ ದಂಪತಿಗಳಿಗೂ ಮತ್ತು ಆರೋಪಿತನಿಗೂ ತಂಟೆಯಾಗಿದೆ. ಈ ಹಿನ್ನಲೆಯಲ್ಲಿ ಹಿರಿಯರು ಆರೋಪಿತನಿಗೆ ಬುದ್ದಿವಾದ ಹೇಳಿದ್ದರು. ಇದರಿಂದ ಆರೋಪಿತನು ತನ್ನಷ್ಟಕ್ಕೆ ತಾನು ಇದ್ದು ಬಿಟ್ಟಿದ್ದನು.

ಆದರೆ ಇದೆ ಸಿಟ್ಟಿನ ಹಿನ್ನಲೆಯಲ್ಲಿ ಕಳೆದ ದಿ. 9 ರಂದು ಸಾಯಂಕಾಲ ಮೃತ ಮಹಿಳೆ ಹೊಲದಲ್ಲಿ ಬೆಳೆಗಳಿಗೆ ನೀರು ಹಾಯಿಸುತ್ತಿದ್ದ ವೇಳೆ ಆರೋಪಿತ ವ್ಯಕ್ತಿ ಮಹಿಳೆಯನ್ನು ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿದ್ದಾನೆ. ಗದ್ದ ಮತ್ತು ಕುತ್ತಿಗೆಗೆ ಗಂಭೀರವಾದ ಗಾಯಗಳಾದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಘಟನೆ ಸಂಬಂಧ ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂದಿಸಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!