Select Page

Advertisement

ನವಜಾತ ಹೆಣ್ಣು ಶಿಶುವನ್ನು ರಸ್ತೆ ಪಕ್ಕದಲ್ಲಿ ಎಸೆದು ಹೋದ ರಾಕ್ಷಸರು

ನವಜಾತ ಹೆಣ್ಣು ಶಿಶುವನ್ನು ರಸ್ತೆ ಪಕ್ಕದಲ್ಲಿ ಎಸೆದು ಹೋದ ರಾಕ್ಷಸರು

ರಾಮದುರ್ಗ: ತಾಯಿ ಗರ್ಭದಿಂದ ಜನಿಸಿದ ಹೆಣ್ಣು ಶಿಶುವೊಂದನ್ನು ಮುಳ್ಳಿನ ಬೇಲಿಯಲ್ಲಿ ಬಿಟ್ಟುಹೋದ ಕರಳು ಹಿಂಡುವ ಘಟನೆ ತಾಲೂಕಿನ ಮುದೇನೂರ ಗ್ರಾಮದ ಪರಿಶಿಷ್ಠ ಕಾಲೋನಿಯ ಹತ್ತಿರದ ರಸ್ತೆ ಪಕ್ಕದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.

ಈ ಕುರಿತು ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ರಾಮದುರ್ಗ ಪಿಎಸ್‌ಐ ಸುನೀಲಕುಮಾರ ನಾಯಕ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಶಿಶು ಅಭಿವೃದ್ಧಿ ಇಲಾಖೆಯ ತಾಲೂಕಾ ಯೋಜನಾಧಿಕಾರಿ ಶಂಕರ ಕಂಬಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಮಗುವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!