Select Page

Advertisement

ವರ್ಲ್ಡ್ ಕಪ್ ಹಿಡಿದು ಮೈದಾನಕ್ಕೆ ಬಂದ ಕ್ರಿಕೆಟ್ ದೇವರು ಕೊಟ್ಟ ಸಂದೇಶ ಏನು…?

ವರ್ಲ್ಡ್ ಕಪ್ ಹಿಡಿದು ಮೈದಾನಕ್ಕೆ ಬಂದ ಕ್ರಿಕೆಟ್ ದೇವರು ಕೊಟ್ಟ ಸಂದೇಶ ಏನು…?

ಸಧ್ಯ ಭಾರತದ ನೆಲದಲ್ಲಿ ಐಸಿಸಿ ವಲ್ಡ್೯ ಕಪ್ ಕ್ರಿಕೆಟ್ ಪಂದ್ಯಾವಳಿ ಪ್ರಾರಂಭವಾಗಿದ್ದು ಕಳೆದ ಬಾರಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ತಂಡದ ನಡೆವೆ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರೀ ಅಂತರದ ಗೆಲುವು ಸಾಧಿಸಿದೆ. ಈ ಮಧ್ಯೆ ಉದ್ಘಾಟನಾ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಎಲ್ಲರ ಆಕರ್ಷಣೀಯ ವ್ಯಕ್ತಿಯಾಗಿದ್ದಾರೆ.

ಹೌದು ಅತ್ಯಂತ ಅದ್ಧೂರಿಯಾಗಿ ನಡೆಯಬೇಕಿದ್ದ ಈ ಬಾರಿ ವಲ್ಡ್ ಕಪ್ ಕ್ರಿಕೆಟ್ ಕ್ರೀಡಾಕೂಟವನ್ನು ಅತ್ಯಂತ ಸರಳವಾಗಿ ಪ್ರಾರಂಭಿಸಲು ಬಿಸಿಸಿಐ ನಿರ್ಧರಿಸಿತ್ತು.‌ ಇದರಂತೆ ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ಈ ಬಾರಿಯ ಐಸಿಸಿ ಟ್ರೊಫಿ ( ICC trophy ) ಹಿಡಿದು ಮೈದಾನಕ್ಕೆ ಬರುವ ಮೂಲಕ ಪಂದ್ಯಾವಳಿಗಳಿಗೆ ಚಾಲನೆ ನೀಡಲಾಯಿತು. ಸಧ್ಯ ಸಚಿನ್ ಕ್ರೀಡಾಂಗಣ ಪ್ರವೇಶವೂ ಅಂತರಾಷ್ಟ್ರೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆದ್ದಿದೆ.

6 ಬಾರಿ ಅಂತರಾಷ್ಟ್ರೀಯ ವಿಶ್ವಕಪ್ ಪ್ರತಿನಿಧಿಸಿ ಹಲವು ದಾಖಲೆ ಹೊಂದಿರುವ ಸಚಿನ್ ತೆಂಡೂಲ್ಕರ್ ಅವರನ್ನು ಈ ಬಾರಿ 2023 ಐಸಿಸಿ ವಿಶ್ವಕಪ್ ಕ್ರೀಡಾಕೂಟದ ಜಾಗತಿಕ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ವಿಶ್ವಕಂಡ ಸರ್ವಶ್ರೇಷ್ಠ ಆಟಗಾರನಾದ ಸಚಿನ್ ತೆಂಡೂಲ್ಕರ್ ಅವರಿಗೆ ಕ್ರಿಕೆಟ್ ಲೋಕ ನೀಡಿದ ಸನ್ಮಾನ ಅಷ್ಟಿಷ್ಟಲ್ಲ. ಈ ಎಲ್ಲಾ ಕಾರಣಗಳಿಂದ ಸಚಿನ್ ಉದ್ಘಾಟನಾ ಪಂದ್ಯದಲ್ಲಿ ಕಪ್ ನೀಡುವ ಮೂಲಕ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ತನ್ನ ಅಭಿಪ್ರಾಯ ಹಂಚಿಕೊಂಡಿರುವ ಸಚಿನ್. 1987 ರ ವಿಶ್ವಕಪ್ ನಲ್ಲಿ ಬಾಲ್ ಬಾಯ್ ಆಗಿದ್ದೆ, ನಂತರ ಆರು ಬಾರಿ ಐಸಿಸಿ ವಿಶ್ವಕಪ್ ಪ್ರತಿನಿಧಿಸಿದ್ದೇನೆ. 2011 ರ ವಿಶ್ವಕಪ್ ಗೆದ್ದಿದ್ದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ ಎಂದು ಹೇಳಿದ್ದಾರೆ.

ಕ್ರಿಕೆಟ್ ದೇವರನ್ನು ಭಾರತೀಯ ಜನ ಈಗಲೂ ಮಿಸ್ ಮಾಡಿಕೊಳ್ಳುತ್ತಾರೆ. ಮೊದಲ ಪಂದ್ಯದಲ್ಲಿ ಸಚಿನ್ ಕಪ್ ನೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಚಿನ್….ಸಚಿನ್ ಎನ್ನುವ ಜಯಘೋಷ ಮೊಳಗಿದ್ದು ಹಳೆಯ ನೆನಪು ಮರುಕಳಿಸುವಂತೆ ಮಾಡಿತು.

Advertisement

Leave a reply

Your email address will not be published. Required fields are marked *

error: Content is protected !!